ಮಾವಿನ ಹಣ್ಣಿನ ಗೊಜ್ಜು

ಮಾವಿನ ಹಣ್ಣಿನ ಗೊಜ್ಜು

ಬೇಕಿರುವ ಸಾಮಗ್ರಿ

ಮಾವಿನ ಹಣ್ಣಿನ ಹೋಳುಗಳು - ೨ ಕಪ್, ತೆಂಗಿನ ತುರಿ - ೧ ಕಪ್, ಒಣಮೆಣಸಿನಕಾಯಿ - ೮, ಹುರಿಗಡಲೆ - ೨ ಚಮಚ, ಬೆಲ್ಲದ ಹುಡಿ - ೨ ಚಮಚ, ಹುಣಸೆ ರಸ - ೧ ಚಮಚ, ಅರಶಿನ ಅರ್ಧ ಚಮಚ, ಇಂಗು - ಕಾಲು ಚಮಚ, ಎಣ್ಣೆ - ೩ ಚಮಚ, ಸಾಸಿವೆ - ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಒಣಮೆಣಸಿನಕಾಯಿ, ಹುರಿಗಡಲೆ, ತೆಂಗಿನಕಾಯಿ ತುರಿ, ಅರಶಿನ ಮತ್ತು ಇಂಗು ಸೇರಿಸಿ ರುಬ್ಬಿ. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಸಾಲೆ, ಹುಣಸೆರಸ, ಬೆಲ್ಲ ಹಾಕಿ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ, ಮಾವಿನಹಣ್ಣಿನ ಹೋಳುಗಳು, ಉಪ್ಪು ಸೇರಿಸಿ ಎರಡು ನಿಮಿಷ ಕುದಿಸಿದರೆ, ಮಾವಿನಹಣ್ಣಿನ ಗೊಜ್ಜು ರೆಡಿ. ಚಪಾತಿಯೊಂದಿಗೆ ಇಲ್ಲವೇ ಅನ್ನದೊಂದಿಗೆ ಸವಿಯಲು ಹಿತಕರ.