*ಮಾವಿನ ಹಣ್ಣು (ಕುಸುಮ ಷಟ್ಪದಿ)*
ಕವನ
ಹಣ್ಣುಗಳ ರಾಜನನು
ಬಣ್ಣಿಸುತ ಬರೆಯುವೆನು
ನುಣ್ಣನೆಯ ನುಣುಪಿನಾ ಮಾವಿನಣ್ಣು|
ತಣ್ಣನೆಯ ರಸದಲ್ಲಿ
ಸುಣ್ಣದಲಿ ಮೀಯುತ್ತ
ಹಣ್ಣಾಗಿ ಮಾಸದೆಯೆ ಕಂಗಳಲ್ಲಿ||
ಬಳಸುವರು ಪಾಕದಲಿ
ಫಳಫಳನೆ ಮಿಂಚುವಾ
ನಳಿಸುತಿಹ ಹಣ್ಣನ್ನು ಗೃಹದಲ್ಲಿಯೆ|
ಜೋಳದಾ ಹೊಲದಲ್ಲಿ
ಪೀಳಿಗೆಯ ಬೆಳೆಸುತ್ತ
ಪೌಳಿಯಲಿ ಹಾಕುವರು ಹಣ್ಣಾಗಲು||
ಉಪ್ಪಿನಾ ಕಾಯಾಗಿ
ತುಪ್ಪದಾ ಡಬ್ಬದಲಿ
ಕಪ್ಪಾಗಿ ಕೊನೆಗೊಮ್ಮೆ ರುಚಿಯಲ್ಲಿಯೆ|
ಮುಪ್ಪಾದ ಮುದುಕರದು
ಬೆಪ್ಪಾಗಿ ತಿನುತಿರಲು
ಚಪ್ಪಟೆಯ ಮಾವಿನುಪ್ಪಿನಕಾಯನು||
ಬಸಿರಿನಲಿ ಬಯಕೆಯದು
ತುಸುಹುಳಿಯ ಕಾಯಿಯದು
ರಸತಗೆದ ಹಣ್ಣಲ್ಲಿ ಬರಿಗೊರಟೆಯು|
ವಿಷವಿಲ್ಲವಿದರಲ್ಲಿ
ಹೊಸತಂಪು ತನುವಿಂಗೆ
ರಸದಿಂದ ಸೀಕರಣೆ ಬಲುರುಚಿಯದು||
-*ಶಂಕರಾನಂದ ಹೆಬ್ಬಾಳ*
ಚಿತ್ರ್