ಮಾವಿನ ಹೂವಿನ ತಂಬುಳಿ
ಬೇಕಿರುವ ಸಾಮಗ್ರಿ
ಮಾವಿನ ಹೂವು, ಕಾಯಿ ತುರಿ , ಹಸಿಮೆಣಸಿನ ಚೂರು (ಬೇಕಾದರೆ ಮಾತ್ರ), ಕಡೆದ ಮಜ್ಜಿಗೆ, ಒಗ್ಗರಣೆಗೆ ಒಣ ಮೆಣಸು, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಇಂಗಿನ ಚೂರು, ಎಣ್ಣೆ, ರುಚಿಗೆ ಉಪ್ಪು.
ತಯಾರಿಸುವ ವಿಧಾನ
ಕಾಯಿತುರಿಯ ಜೊತೆ ಮಾವಿನ ಹೂವು ಮತ್ತು ಚಿಟಕಿ ಉಪ್ಪು, ಹಸಿಮೆಣಸಿನ ಚೂರು, ಹಾಕಿ ನುಣ್ಣಗೆ ರುಬ್ಬಿ ಪಾತ್ರಗೆ ಹಾಕಿ. ಇದಕ್ಕೆ ಕಡೆದ ಮಜ್ಜಿಗೆ, ರುಚಿಗೆ ಬೇಕಾದಷ್ಟು ಉಪ್ಪು, ಹಾಕಿ ಹದ ಮಾಡಿ, ಎಣ್ಣೆ, ಉದ್ದಿನ ಬೇಳೆ, ಒಣ ಮೆಣಸಿನ ಚೂರುಗಳು, ಕರಿಬೇವು, ಸಾಸಿವೆ, ಚಿಟಕಿ ಇಂಗು ಹಾಕಿ ಒಗ್ಗರಣೆ ಮಾಡಿ. ಊಟಕ್ಕೆ ಉಪಯೋಗಿಸಲು ಚೆನ್ನಾಗಿರುತ್ತದೆ.
-ಕಲ್ಪನಾ ಪ್ರಭಾಕರ ಸೋಮನಳ್ಳಿ