ಮಾವು- ಹೂವು

ಮಾವು- ಹೂವು

ಕವನ

ಮಾಗಿಯ ಚಳಿಯಲ್ಲಿ

ಮಾಮರದ ತುಂಬೆಲ್ಲಾ

ಮಾವಿನ್ಹುವಿನ ಘಮಲು !

 

ಸರಿದ ಕಾಲದ್ಹರಳಿ

ಹೂವುಗಳು ಮಿಡಿಯಾಗಿ

ತುಳುಕಾಡಿತು ಗೊಂಚಲು !

 

ಚಿಗುರೆಲೆಯ ರಸೌಷಧಿ

ಸವಿದಿತ್ತು ಕೋಗಿಲೆಯು

ಸುಸ್ವರವದು ತುಂಬಲು !

 

ಮಾಮರದಲ್ಲಿ ಕೋಗಿಲೆ

ಸ್ನೇಹದ ಬೆಸುಗೆಯಲ್ಲಿ...

ಭಾವುಕತೆಯು ಹೊಮ್ಮಲು !

 

ಕುಹೂಕುಹೂ ಗಾನವು

ಮಧುರತೆಯಲ್ಲಿ ಸ್ವರವು

ಕಂಪಿನ್ಹಿಂಪಲಿ ಹರಡಲು !

 

ಮಾಮರದ ಚಿಗುರು

ಕೋಗಿಲೆಗಲ್ಲಿ ಒಗರು 

ಪರಿಶುದ್ಧದಲ್ಲಿ ಗಂಟಲು !

 

ಹಿತ್ತಲ ಗಿಡಮರಗಳಲ್ಲಿ

ನೂರೆಂಟು ಮದ್ದುಂಟು

ಅದನ್ಹರಿತು ಬಳಸಲು !

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್