ಮಾಸದಿರಲೀ ಚೆಲುವು

ಮಾಸದಿರಲೀ ಚೆಲುವು

ಕವನ

 ಏನು ನೋಡುತ್ತಿರುವೆ ಮಗು

ದಾಟಲಾಗದ ಗೋಡೆಯಿದೆ

ಕಾಣದ ಅಗಾಧ ಪ್ರಪಾತವಿದೆ

ಜನಜನರ  ನಡುವೆ

ಅಡಗಿರುವುದೆಲ್ಲಿ

ಅನ್ಯೋನ್ಯತೆಯ ಒಲುಮೆಯ ಸೆಲೆ

ಜನರೆದೆಯ ಕೊಳದಲ್ಲಿ

ಕಾಣಿಸುವುದಿಲ್ಲ ಆಳ

ಕುತೂಹಲದ ಕಣ್ಣು ತೆರೆದ ಮುಗ್ಧ ಮಗು

ಎಷ್ಟಿರುವುದೋ ಏನೋ

ಭೂತಕಾಲದ ಒಡಲ ಗುಟ್ಟು

ಭವಿಷ್ಯದ ಹೆಜ್ಜೆಗೆ

ಕವಲುದಾರಿ

ನಿನಗರ್ಥವಾಗದು ಮಗು

ಈಗ

ನಿನಗರ್ಥವಾಗಿಸದೆ ಬಿಡದೀ ಕಾಲ

ಬೇಗ

ಆದರೂ ಚಿರವಾಗಿರಲೀ

ಲವಲವಿಕೆಯ ಸೂಸುನಗು

ಕುತೂಹಲದ ಅಂತರ್ದೃಷ್ಟಿ

ಮಾಸದಿರಲಿ ಹಸುಳೆತನ

ಮಾಸದಿರಲೀ ಚೆಲುವು

Comments