*ಮಿಡಿದ ರಾಗ* - ಭಕ್ತಿ ಗೀತೆ

*ಮಿಡಿದ ರಾಗ* - ಭಕ್ತಿ ಗೀತೆ

ಕವನ

ಹೃದಯ ಭಜಿಸಿದೆ ನಿನ್ನ, ಬಿಡದೆ 

ನಿನ್ನನೆ ರಾಮ

ಪದವ ಹಾಡಿದೆ ಜೀವ, ಮಿಡಿದು 

ಭಕ್ತಿಯ ರಾಗ||ಪ||

 

ಅಂದದೊಲವಿನ ಕಾಂತಿ, ಮನವ 

ಸೆಳೆದಿಹುದಿಲ್ಲಿ

ಎದೆಯ ಬಂಧವ ಬೆಸೆದು,ಉಸಿರ 

ಬಡಿತವು ತಾನು

ಹೃದಯ ಕಮಲದಿ ಮನವು,ಕೂಡಿ 

ಬೆರೆತಿದೆ ಒಲವು||೧||

 

ರಾವಣಾರಿಯು ನೀನು,ರಾಮಚಂದ್ರನು 

ನೀನು

ಕದನ ಶೂರನೆ ರಾಮ,ಅದಟ ವಿಕ್ರಮ 

ರಾಮ

ಹನುಮನಾತ್ಮದಿ ನಿಂದು, ಬೆರೆವೆ ತನುವನು 

ಇಂದು||೨||

 

ಸೀತಮಾತೆಯ ಪತಿಯು,ಎನಗೆ ನಿನ್ನದೆ 

ಸ್ತುತಿಯು

ಒಲವು ತೋರುತ ನಲಿವೆ, ಚೆಲುವು ತೋರುತ 

ಗೆಲುವೆ

ಸುಮದ ಗಂಧವು ರಾಮ, ತಮದ ಪ್ರಣತಿಯು 

ರಾಮ||೩||

 

ಗಾಳಿ ತಂಪದು ನೀನೆ, ಕುಕಿಲ ಇಂಪದು 

ನೀನೆ

ಭುವನ ಕೌಮುದಿಯಾಗಿ,ಬರುವ ಚಂದ್ರನು 

ನೀನೆ

ಶಿರವ ಬಾಗುತ ಬರೆವೆ,ರಾಮ ಚರಣದಿ 

ಮನವು||೪||

 

-*ಶಂಕರಾನಂದ ಹೆಬ್ಬಾಳ*

 

ಚಿತ್ರ್