ಮಿಥಿಲೆಯ ವೀರವನಿತೆ - ಸೀತೆ

ಮಿಥಿಲೆಯ ವೀರವನಿತೆ - ಸೀತೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಅಮೀಶ್ ಕನ್ನಡಕ್ಕೆ: ದುಶ್ಯಂತ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೨೫.೦೦, ಮುದ್ರಣ : ಜನವರಿ ೨೦೧೮

ಅಮೀಶ್ ಅವರ ರಾಮಚಂದ್ರ ಸರಣಿಯ ಎರಡನೇ ಭಾಗವೇ ‘ಮಿಥಿಲೆಯ ವೀರವನಿತೆ -ಸೀತೆ'. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ದುಷ್ಯಂತ ಇವರು. ಮೊದಲ ಭಾಗದ ಅನುವಾದ ಮಾಡಿದ ಅನುವಾದಕರನ್ನು ಕೈಬಿಟ್ಟು ಹೊಸ ಅನುವಾದಕರನ್ನು ಪ್ರಕಾಶಕರು ಹುಡುಕಿದ್ದಾರೆ. ಮೊದಲ ಭಾಗದ ಅನುವಾದ ಬಹಳ ಕಳಪೆಯಾಗಿತ್ತು. ಆದರೆ ಎರಡನೇ ಭಾಗದ ಅನುವಾದ ಪರವಾಗಿಲ್ಲ ಎನಿಸುವಂತಿದೆ. 

ಪುಸ್ತಕದ ಬೆನ್ನುಡಿಯಲ್ಲಿ “ಭಾರತ ಇಂದು ಒಡಕು, ಭಿನ್ನಾಭಿಪ್ರಾಯ, ಪ್ರತಿಭಟನೆ ಮತ್ತು ಬಡತನಗಳಿಂದ ಆವೃತವಾಗಿದೆ. ಜನ ತಮ್ಮನಾಳುವವರನ್ನು ದ್ವೇಷಿಸುತ್ತಾರೆ. ಆಳುವ ಪ್ರಭುಗಳ ಭ್ರಷ್ಟಾಚಾರ ಮತ್ತು ಸ್ವಾರ್ಥವನ್ನು ತಿರಸ್ಕಾರದಿಂದ ಕಾಣುತ್ತಿದ್ದಾರೆ. ಹೊರಗಿನವರು ಈ ಒಡಕು, ಭಿನ್ನಮತಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಲಂಕೆಯ ಅಸುರ ದೊರೆ ರಾವಣ ಬಲಿಷ್ಟ. ಸಪ್ತ ಸಿಂಧುವಿನತ್ತ ಅವನ ಕೆಟ್ಟ ದೃಷ್ಟಿ ಬಿದ್ದಿದೆ. 

ಪವಿತ್ರ ಭರತ ಭೂಮಿಯ ರಕ್ಷಕರಾದ ಆದಿವಾಸಿಗಳಿಗೆ ಇವೆಲ್ಲವನ್ನೂ ಕಂಡು ಸಾಕುಸಾಕೆನಿಸುತ್ತದೆ. ಅವರೀಗ ಸಂರಕ್ಷಕನೊಬ್ಬನ, ಉದ್ಧಾರಕರೊಬ್ಬನ ಅಗತ್ಯ ಕಂಡು ಬಂದಿದೆ. ಉದ್ಧಾರಕನಿಗಾಗಿ ಅನ್ವೇಷಣೆ ಶುರು ಮಾಡುತ್ತಾರೆ. ಪರಿತ್ಯಕ್ತ ಶಿಶುವೊಂದು ಅವರ ಕಣ್ಣಿಗೆ ಬೀಳುತ್ತದೆ. ರಣಹದ್ದೊಂದು ಈ ಕೂಸನ್ನು ವನ್ಯಮೃಗಗಳ ದಾಳಿಯಿಂದ ರಕ್ಷಿಸುತ್ತಿರುತ್ತದೆ. ಮಿಥಿಲೆಯ ದೊರೆ ಈ ಹೆಣ್ಣು ಕೂಸನ್ನು ದತ್ತು ತೆಗೆದುಕೊಂಡು ಪೋಷಿಸಿ ಬೆಳೆಸುತ್ತಾನೆ. ಈ ಬಾಲೆ ಅಸಾಧರಣ ಸ್ತ್ರೀಯಾಗಿ ಬೆಳೆಯುತ್ತಾಳೆ. ಅವಳು ಸಾಧಾರಣ ಹೆಂಗಸಲ್ಲ ಅವಳು ಸೀತೆ.

ದತ್ತು ಮಗಳೊಬ್ಬಳು ವೀರವನಿತೆಯಾಗಿ ಬೆಳೆಯುವ, ಪ್ರಧಾನ ಮಂತ್ರಿಯಾಗುವ, ದೇವತೆಯಾಗುವ ರೋಚಕ ಕಥೆ ಅಮೀಶ್ ಅವರ ಮತ್ತೊಂದು ಸಾಹಸ ಭರಿತ ಅಮೋಘ ಕೃತಿ.”

ಸುಮಾರು ೨೮೮ ಪುಟಗಳ ಈ ಪುಸ್ತಕವನ್ನು ಸೊಗಸಾಗಿ ಓದಿ ಕೊಂಡು ಹೋಗಬಹುದು. ನಾವು ಓದಿದ ವಾಲ್ಮೀಕಿ ರಾಮಾಯಣದ ಸೀತೆಗೂ ಇಲ್ಲಿಯ ಸೀತೆಗೂ ಇರುವ ವಿಭಿನ್ನತೆಯು ಗಮನ ಸೆಳೆಯುತ್ತದೆ.