ಮಿನಿ ಮಿನಿ ಕಥೆ - ಕಂಬನಿ

ಮಿನಿ ಮಿನಿ ಕಥೆ - ಕಂಬನಿ

“ನೀವು ಮಾತ್ರ ಬದಲಾಗಬೇಡಿ. ನನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಬಾರದು. ನನಗೆ ನೀವು ಬೇಕು.” ಎಂದಳು ತ್ರಿವೇಣಿ. ಅವಳು ತನ್ನ ಮೇಲಿಟ್ಟಿದ್ದ ಪ್ರೀತಿಯನ್ನು ಕಂಡು ಸಂತೋಷಪಟ್ಟ ಪವನ್, ತ್ರಿವೇಣಿಯನ್ನು ಮನಸಾರೆ ಮೆಚ್ಚಿದ್ದ. 

ಈಗ ತ್ರಿವೇಣಿ ಬದಲಾಗಿದ್ದಾಳೆ. ಪವನ್ ಎದುರಿಗಿದ್ದರೂ ಕ್ಯಾರೇ ಎನ್ನುತ್ತಿಲ್ಲ ! ಪವನ್ ನೊಂದಿದ್ದಾನೆ. ಆಕಾಶದ ಕಡೆ ಮುಖ ಮಾಡಿದ್ದಾನೆ. ಕಂಬನಿಯ ಹನಿಗಳು ಜಿನುಗುತ್ತಿವೆ. ಎಲ್ಲೋ ಹಾಡೊಂದು ಕೇಳಿ ಬರುತ್ತಿವೆ.

“ಪ್ರೇಮ ಗೀಮ ಜಾನೇ ದೋ ನಂಬಬಾರದೋ"

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ