ಮಿನಿ ಮಿನಿ ಕಥೆ - ಗಿಫ್ಟ್
ಕಾಲ್ಗೆಜ್ಜೆಯ ಸದ್ದು ಕೇಳಿ ಬಂದತ್ತ ಪವನ್ ಕಣ್ಣು ಹಾಯಿಸಿದ. ಹಂಸ ನಡಿಗೆಯಲ್ಲಿ ನಡೆದು ಬರುತ್ತಿದ್ದಳು ಅವನ ಕಾವ್ಯ ಕನ್ನಿಕೆ ತ್ರಿವೇಣಿ. ಮುಗುಳ್ನಕ್ಕು ಸ್ವಾಗತಿಸಿದ.
“ಹಾಯ್ ಪವನ್, ನಾಳೆ ಏನು ಸ್ಪೆಷಲ್ ಗೊತ್ತಾ?”
“ಇನ್ನೇನು ಅದೇ ಪ್ರೇಮಿಗಳ ದಿನಾಚರಣೆ ತಾನೇ?”
“ಏನು ಅಷ್ಟು ಹಗುರವಾಗಿ ಮಾತಾಡ್ತೀರಾ? ಪ್ರೇಮಿಗಳ ದಿನಾಚರಣೆ ತಪ್ಪಾ?” ಎಂದು ಮುನಿಸು ತೋರಿದಳು.
“ಪ್ರೀತಿಸೋದು ತಪ್ಪಲ್ಲ, ದಿನಾಚರಣೆ ನನಗಿಷ್ಟ ಇಲ್ಲ. “
“ನಿಮ್ಮದು ಬರೀ ಇದೇ ಆಯ್ತು. ನಾಳೆ ನನಗೊಂದು ವಿಶೇಷವಾದ ಗಿಫ್ಟ್ ತರ್ತೀರಾ?”
“ಅದೇನು ಕೇಳು, ಆದರೆ ನನ್ನ ಯೋಗ್ಯತೆ ನೋಡಿ ಕೇಳು" ಎಂದ ಪವನ್. ಅವಳನ್ನೇ ದಿಟ್ಟಿಸಿದ.
“ನಾನು ಕೇಳೋ ಗಿಫ್ಟ್ ಗೊತ್ತಾದರೆ ನೀವು ನಕ್ಕು ಬಿಡ್ತೀರಾ ! ಏನಿಲ್ಲ ನಾನು ಒಂದು ಸಾರಿನೂ ಸ್ವೀಟ್ ಬೀಡಾ ತಿಂದಿಲ್ಲ. ನಾಳೆ ಅದನ್ನೇ ತನ್ನಿ" ಎಂದಳು.
ಅಂದು ಪ್ರೇಮಿಗಳ ದಿನ ತ್ರಿವೇಣಿ ಸ್ವೀಟ್ ಬೀಡಾ ಸವಿದಳು. ಪವನ್ ಅವಳ ಅಧರ ಸವಿಯನ್ನು !!
-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ