ಮಿನಿ ಮಿನಿ ಕಥೆ - ನೆನಪು

ಮಿನಿ ಮಿನಿ ಕಥೆ - ನೆನಪು

“ಏಯ್ ಏನಿದೆಲ್ಲ? ನಿನ್ನ ಪರ್ಸ್ ನಲ್ಲಿ ಬರೀ ಚಾಕಲೇಟ್, ಖಾಲಿ ಕವರ್, ಖಾಲಿ ಬಾಕ್ಸ್ ಇದ್ದಾವಲ್ಲ ಏನು ವಿಶೇಷ?” ಎಂದು ಪವನ್, ತ್ರಿವೇಣಿಯನ್ನು ಕಿಚಾಯಿಸಿದ. ಇಬ್ಬರೂ ಪಾರ್ಕೊಂದರಲ್ಲಿ ಕುಳಿತಿದ್ದರು.

“ಹಾಗೆಲ್ಲ ಮಾತಾಡಬೇಡಿ. ಆ ಒಂದೊಂದು ಖಾಲಿಯಲ್ಲೂ ಒಂದೊಂದು ಮಧುರವಾದ ನೆನಪುಗಳಿವೆ. ಅವು ನೀವೇ ನನಗೆ ಫಸ್ಟ್ ಟೈಂ ಕೊಡಿಸಿದ ಚಾಕಲೇಟ್, ಸ್ವೀಟ್ ಬೀಡಾ, ಕಿಟ್ ಕ್ಯಾಟ್ ಮುಂತಾದುವುಗಳ ಪಳಿಯುಳಿಕೆಗಳು" ಎಂದಳು.

ತ್ರಿವೇಣಿಯ ಈ ಹವ್ಯಾಸವನ್ನು ಕಂಡು ಅವಳ ಬಗ್ಗೆ ಪವನ್ ಗೆ ಮತ್ತಷ್ಟು ಪ್ರೀತಿ ಹೆಚ್ಚಾಯಿತು, ಅಭಿಮಾನ ಮೂಡಿ ಬಂತು. ತನ್ನ ಆಯ್ಕೆಯ ಬಗ್ಗೆ ಅವನಿಗೇ ಹೆಮ್ಮೆ ಅನಿಸಿತು. ಅದೇ ಖುಷಿಯಲ್ಲಿ ಅವಳ ಮುಂಗೈಗೊಂದು ಹೂ ಮುತ್ತನಿಟ್ಟ. ದೂರದಲ್ಲೆಲ್ಲೊ ಹಾಡೊಂದು ಕೇಳಿ ಬರುತಲಿತ್ತು “ಸವಿ ಸವಿ ನೆನಪು ಸಾವಿರ ನೆನಪು...."

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ