ಮಿನಿ ಮಿನಿ ಕಥೆ - ಲವ್ ಯು !

ಮಿನಿ ಮಿನಿ ಕಥೆ - ಲವ್ ಯು !

ನನಗೇ ಯಾಕೆ ಹೀಗಾಗ್ತಿದೆ, ಎಲ್ಲರೂ ನನ್ನಿಂದ ದೂರ ಹೋಗ್ತಾ ಇದ್ದಾರಲ್ಲ, ನನ್ನಿಂದೇನು ತಪ್ಪಾಗಿದೆ ಎಂದು ಪವನ್ ಚಿಂತಾಕ್ರಾಂತನಾಗಿದ್ದ.

ಅವನಿಗೆ ಬೇರೆ ಯಾರೂ ದೂರವಾಗಿದ್ದಕ್ಕೆ ಆಗಿದ್ದ ನೋವಿಗಿಂತ, ಪ್ರೇಮದರಮನೆ ಕಟ್ಟಿ, ಕನಸುಗಳನ್ನು ಬಿತ್ತಿ, ಇದ್ದಕ್ಕಿದ್ದಂತೆ ದೂರಾದ ತ್ರಿವೇಣಿಯ ಬಗ್ಗೆ , ಅವಳ ನಿಲುವಿನ ಬಗ್ಗೆಯೇ ಹೆಚ್ಚು ಚಿಂತೆ ಕಾಡುತ್ತಿತ್ತು. ಪ್ರೇಮಿಗಳಾಗಿ ವರುಷಗಳೇ ಉರುಳಿದ ನಂತರ, ಪವನ್ ಅವಳಿಗೆ ‘ಲವ್ ಯು' ಎಂದು ಮೆಸೇಜ್ ಮಾಡಿದ್ದೇ ಆತನಿಗೆ ಮುಳುವಾಗಿತ್ತು !

“ನಮ್ಮ ಮಾಮ ನನ್ನ ಫೋನ್ ಫಾಲೋ ಮಾಡ್ತಿರ್ತಾನೆ, ಇಂತಹ ಮೆಸೇಜ್ ಮಾಡಬೇಡಿ" ಎಂದು ಮರು ಮೆಸೇಜ್ ಹಾಕಿ ಮೌನವಾಗಿ ಬಿಟ್ಟಿದ್ದಳು.

“ಪ್ರೇಮಿಗೆ ಲವ್ ಯು ಎಂದು ಹೇಳಿದ್ದೇ ತಪ್ಪಾಯಿತೇ?” ಎಂಬ ಪ್ರಶ್ನೆಗೆ ಪವನ್ ಗೆ ಉತ್ತರವಾಗಿ ಸಿಕ್ಕಿದ್ದು ಬರೀ ನಿರಾಸೆ, ಮೌನ, ನೋವು, ದುಃಖ !!

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ