ಮಿನಿ ಮಿನಿ ಹನಿಗಳು !
ಇರಲೊಂದು ಧನ್ಯವಾದ
ಗೆಳೆಯರೇ-
ಅದ್ಧೂರೀ
ಸಿನಿಮಾಗಳನು
ನೀವೆಂದೂ ದೂರದಿರಿ
ನುಡಿಯದಿರಿ ಅವಹೇಳನ;
ಮಾಡದಿರಿ ಅಪವಾದ...
ಶ್ರಮ-ಖರ್ಚುನು ಮಾಡಿ
ಸಾಮಾನ್ಯ ಜನಕೆ
ಅಸಾಮಾನ್ಯ
ಸ್ಥಳ-ಭಾವ-ದೃಶ್ಯಗಳನು
ತೋರಿಸುವರು; ಇರಲಿ
ಅವರಿಗೊಂದು ಧನ್ಯವಾದ!
***
ಕಾಲನೆಂಬೋ ವೈದ್ಯ
ಕಾಲವೇ
ಹಚ್ಚುವುದು
ಸರ್ವ
ಸಮಸ್ಯೆಗಳಿಗೆ
ಸೂಕ್ತ
ಮುಲಾಮು...
ಇಂಥ ಮಹಾ
ಪ್ರಕೃತಿ
ವೈದ್ಯನಿಗೆ
ಸಂದುಬಿಡಲಿ
ನಮ್ಮೆಲ್ಲರ
ಸಲಾಮು!
***
ಕನ್ನಡದ ಕಂದಾ...
ನೀ ಬಸವಣ್ಣನವರಂತೆ
ಮಹಾತ್ಮನಾಗದಿರಬಹುದು...
ರಾಜ್ ರಂತೆ ಅದ್ಭುತ ನಟನೂ;
ಕುವೆಂಪುರವರಂತೆ
ಮಹಾ ಸಾಹಿತಿಯೂ...
ಓ ಕನ್ನಡದ ಕಂದಾ...
ಆದರೆ... ಆದರೆ....
ಅವರು ನಡೆದ
ಕನ್ನಡದ ಹಾದಿಯಲಿ
ಅಂಬೆಗಾಲಿಕ್ಕಿ-ನಡೆದು
ಪಡೆದು ಬಿಡು
ಜೀವನದಲಿ ಆನಂದಾ !
***
ಮಾಲ್-ಕಮಾಲ್!
ಇಂದು
ಕಾರ್ಪೊರೇಟ್
'ಮಾಲ್' ಗಳ
ಮಾಲೀಕರೇ
ಅತ್ಯಂತ
ಶ್ರೀಮಂತರು...
ಲಕ್ಷಾಂತರ
ಶ್ರಮಿಕರ
ಫಲವನೇ ಮಾರಿ
ದಂಡಿಯಾಗಿ
ಉಂಡು
ಕೊಬ್ಬುವವರು!
***
ಸಹಮತ-ಭಿನ್ನಮತ
ಸಹಮತವಿದ್ದರೆ-
ಅವರಿಬ್ಬರ
ನಡುವೆ
ದಾಂಪತ್ಯ-ಸರಸ
ಅನ್ಯೋನ್ಯತೆ
ಫಿಕ್ಸ್...
ಭಿನ್ನಮತ
ಬಂದಿತೋ-
ಕೆರಳಿ
ಸಿಂಹ-ಸಿಂಹಿಣಿಯಾಗಿ
ವಿರಸವೇ
ನೆಕ್ಸ್ಟ್!
***
ಮತ್ತದೇ...
ಆಕೆ ಸುಂದರ ನರ್ಸ್;
ಈತ ಸಾಯುವ ರೋಗಿ
ಆಕೆಯ ಅದ್ಭುತ ಶುಶ್ರೂಷೆ...
ಮರುಳಾಗಿ ಪ್ರೀತಿಸಿ;
ಮದುವೆ-
ಮನೆಯೇ ಸುಂದರ ನಾವೆ...
ಸಾಗಿತು ಸಂಸಾರ-
ಕೊನೆ ಕೊನೆಗೆ
ಭ್ರಮ ನಿರಸನ;
ಕೊನೆಗೆ ಡೈವೋರ್ಸ್...
ಆಕೆ ಮತ್ತದೇ ನರ್ಸ್;
ಮತ್ತಾನಿಗೇ ಅದ್ಭುತ ಸೇವೆ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ