ಮಿನುಗುತಾರೆ ಪೂಜಾ....!

ಮಿನುಗುತಾರೆ ಪೂಜಾ....!

ಮಿನುಗುತಾರೆ ಕಲ್ಪನಾ. ಕನ್ನಡದಲ್ಲಿ ಒಬ್ಬರೇ. ಬೇರೆಯವರನ್ನ ಮಿನುಗುತಾರೆ ಅಂತ ಕರೆಯೋಕೆ ಸಾಧ್ಯವೇಯಿಲ್ಲ. ನಮ್ಮನ್ನಗಲಿ ಹೋದ ಈ ತಾರೆ ಸದಾ ತಮ್ಮ ಚಿತ್ರಗಳಲ್ಲಿ ಜೀವಂತ. ಅದೇ ತಾರೆಯನ್ನ ಮತ್ತೆ ತೆರೆಗೆ ತರೋ ಸಾಹಸ ಕನ್ನಡಲ್ಲಿ ಆಗುತ್ತಿದೆ. ಭಾರತೀಯ ಚಿತ್ರರಂಗದ ಮೇರು ನಟಿಯರ ಬದುಕನ್ನ ಕಟ್ಟಿಕೊಡೋ ಪ್ರಯತ್ನವೂ ಆಗುತ್ತದೆ. ಪ್ರಮುಖವಾಗಿ ಇಲ್ಲಿ ಮಿನುಗುವವರು ಮಾತ್ರ ನಮ್ಮ ಮಿನುಗು ತಾರೆ ಕಲ್ಪನಾ..

ಮಿನುಗು ತಾರೆ ಕಲ್ಪನಾ ಅವರ ಚಿತ್ರ ಬದುಕು ದುರಂತ. ವಯುಕ್ತಿಕ ಜೀವನವೂ ಅಷ್ಷಕಷ್ಟ. ಆದ್ರೆ, ಕನ್ನಡದಲ್ಲಿ ಈಗ ಸಿದ್ಧಗೊಳ್ಳಲಿರೋ ಸಿನಿಮಾದಲ್ಲಿ ಕಲ್ಪನಾ ಜೀವನ ಚರಿತ್ರೆ ಇರೋದಿಲ್ಲ. ಕಲ್ಪನಾ ಅವರ ಚಿತ್ರ ಬದುಕಿನ ಸಾಧನೆಯನ್ನೆ ಕಟ್ಟಿಕೊಡೋ ಮಹತ್ತರ ಕೆಲಸವಾಗಲಿದೆ. ಅದರ ಜತೆಗೆ ಹಿಂದಿ ಚಿತ್ರರಂಗದ ಮಹಾನ್ ನಟಿಯರ ಬದುಕನ್ನೂ ಕನ್ನಡದ ಈ ಚಿತ್ರದಲ್ಲಿ ನೋಡಬಹುದು. ಹಾಗೆ ತೆರೆಗೆ ಬರಲು ಮೊದಲ ಹೆಜ್ಜೆ ಇಟ್ಟಿರೋ ಈ ಚಿತ್ರವೇ ಅಭಿನೇತ್ರಿ..

ಮಳೆ ಹುಡುಗಿ ಪೂಜಾ ಗಾಂಧಿ ಈ ಮಹತ್ತರ ಕೆಲಸಕ್ಕೆ ಕೈ ಹಾಕಿದ್ದಾರೆ. ಶ್ರೀ ಕೃಷ್ಣ ಪ್ರೋಡಕ್ಷನ್ ಹೌಸ್ ನಿಂದ ಚಿತ್ರ ನಿರ್ಮಿಸುತ್ತಿದ್ದಾರೆ. ಗೆಳೆತಿ ವೈಜಯಂತಿ ಸಹಾಯದಿಂದ ಆರಂಭವಾಗಿರೋ ನಿರ್ಮಾಣ ಸಂಸ್ಥೆಯ ಮೊದಲ ಕೊಡುಗೆಯಾಗಿ ಅಭಿನೇತ್ರಿ ಬರಲಿದೆ. ಅಭಿನೇತ್ರಿಯನ್ನೆ ಪ್ರಮುಖವಾಗಿಟ್ಟುಕೊಂಡು ಬರುತ್ತಿರೋ ಈ ಚಿತ್ರದಲ್ಲಿ ಆ ಅಭಿನೇತ್ರಿ ಬೇರೆ ಯಾರೂ ಅಲ್ಲ. ಪೂಜಾ ಗಾಂಧಿನೇ ಇಲ್ಲಿ ಅಭಿನೇತ್ರಿ..

70 ರ ದಶಕದ  ಆ ವೈಭವನ್ನ ಕಟ್ಟಿಕೊಡಲಿರೋ ಚಿತ್ರದಲ್ಲಿ ಪೂಜಾ ಆಗಿನ ನಾಯಕಿಯರ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಚಿತ್ರದ ನಾಯಕಿಯಾಗಿರೋ ಪಾತ್ರವನ್ನೇ ನಿರ್ವಹಿಸಲಿರೋ ಪೂಜಾ, ಸೂಕ್ತ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಬೇಕಾದ ದೇಹಭಾಷೆಯನ್ನ ಕಲಿತಿದ್ದಾರೆ. ಆಗಿನ ಉಡುಗೆ-ತೊಡುಗೆಯನ್ನೂ ಆಯ್ಕೆ ಮಾಡಿಕೊಂಡು ತೇಟ್ ಹಳೆ ನಾಯಕಿಯರ ರೂಪವನ್ನೆ ತಾಳಿದ್ದಾರೆ.

ಪೂಜಾ ಅಭಿನೇತ್ರಿಯಾಗಲು ಸ್ಪೂರ್ತಿ ಯಾರದೋ ಏನೋ.ಎಲ್ಲರೂ ತಮ್ಮ ಈ ಚಿತ್ರಕ್ಕೆ ಸ್ಪೂರ್ತಿ ಅಂತಲೇ ಹೇಳೊ ಪೂಜಾ. ಹಿಂದೆ ಯುವ ನಿರ್ದೇಶಕ ಸತೀಶ್ ಪ್ರಧಾನ್ ಇದ್ದಾರೆ. ಮೊದಲ ನಿರ್ದೇಶನದ ಈ ಅಭಿನೇತ್ರಿಯನ್ನ ಅಷ್ಟೇ ಅಚ್ಚು ಕಟ್ಟಾಗಿ ತೆರೆಗೆ ತರಲು ಯೋಚನೆ ಮಾಡಿದ್ದಾರೆ. ಶ್ರಮವನ್ನೂ ಪಟ್ಟಿರೋದು ಗೊತ್ತಾಗುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ, ಚಿತ್ರದ ಪೋಸ್ಟರ್ ಗಳಲ್ಲಿ ಬಳಸಿರೋ ಪೂಜಾ ಗಾಂಧಿ ಫೋಟೋಗ್ರಾಫ್ ಗಳು. ಇವುಗಳನ್ನ ತೆಗೆಯಲಿಕ್ಕೇನೆ ಸಾಕಷ್ಟು ಶ್ರಮಪಟ್ಟಿರೋದು ಎದ್ದು ಕಾಣುತ್ತದೆ. ಆ ಕಷ್ಟಕ್ಕೆ ಪ್ರತಿ ಫಲವೂ ಸಿಕ್ಕಿದೆ. ಚಿತ್ರ ಫೋಟೋಗಳನ್ನ ನೋಡಿದ ಪ್ರತಿಯೊಬ್ಬರು ಈಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾಮೆರಾಮೆನ್ ಚಂದ್ರಶೇಖರ್ ಅಭಿನೇತ್ರಿಯನ್ನ ಸೆರೆ ಹಿಡಿಯುತ್ತಿದ್ದಾರೆ. ಆಗಿನ ದಿನಗಳನ್ನ ಮತ್ತೊಮ್ಮೆ ಈಗ ತೆರೆಗೆ ತರೋಕೆ ಬೇಕಾದ ಸೂಕ್ತ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.ಸಂಗೀತ ನಿರ್ದೇಶಕ ಮನೋಮೂರ್ತಿಯವರ ಮಾಧುರ್ಯದ ಸ್ಪರ್ಶ ಇಲ್ಲೂ ಪ್ರೇಕ್ಷಕರಿಗೆ ದೊರೆಯಲಿದೆ. ಸಾಹಿತಿಗಳಾದ ಜಯಂತ್ ಕಾಯ್ಕಿಣಿ ಹಾಗೂ ವಿ.ನಾಗೇಂದ್ರ ಪ್ರಸಾದ್ ಗೀತೆಗಳನ್ನ ರಚಿಸುತ್ತಿದ್ದಾರೆ. ಈ ಮೂಲಕ ಪೂಜಾ ಗಾಂಧಿ, ಹೊಸ ಸಂವತ್ಸರ ಶುರುವಾಗಿದೆ. ಅಭಿನೇತ್ರಿ ಅನ್ನೋ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರೋ ಪೂಜಾ ಗಾಂಧಿ, ಈ ಚಿತ್ರದ ಅಭಿನಯದಿಂದಲೂ ಅಭಿನೇತ್ರಿ ಅಂತ ಕರೆಸಿಕೊಳ್ಳೊ ಹಾಗೆ ಆಗಲಿ.

-ರೇವನ್

Comments

Submitted by makara Sun, 09/01/2013 - 12:31

ಮಿನುಗು ತಾರೆ ಅಭಿನೇತ್ರಿಯ ಮೂಲಕ ಮತ್ತೊಮ್ಮೆ ಕನ್ನಡ ರಸಿಕರ ಮನಗಳಲ್ಲಿ ಮಿನುಗಲಿ. ಅದರ ಬಗ್ಗೆ ಉತ್ತಮ ಮಾಹಿತಿ ನಿಮಗೆ ಧನ್ಯವಾದಗಳು ರೇವನ್ ಅವರೆ.