ಮಿಲನ
ಕವನ
ನಿಶ್ಚಲ ನೀರಿನ ದರ್ಪಣ ದರ್ಶನ
ಚೆಲುವು ಒಲವಾಗಿ ಗೀತ ಗಾಯನ
ಆಗಸ ಭುವಿಯ ಸೇರಿ ಗೆಲುವು
ದೂರಗಳು ದೂರಾಗಿ ಭಾವಗಳ ನಲಿವು.
ಹಸಿರ ತೋರಣ ಕಟ್ಟಿದೆ ಪ್ರಕೃತಿ
ಶುಭದ ಘಳಿಗೆಗೆ ಕಾದಿದೆ ಮತಿ
ಸಾಕ್ಷಿ ಬಂಧಕೆ ಜಲದ ಒಡಲು
ಒಲವು ನೀರ ಹನಿಗಳಂತೆ ಕಡಲು.
ಇಲ್ಲಿ ಎಲ್ಲವೂ ಅಮಿತ ಭವ್ಯ
ನೀಲಿ ಹಸಿರ ಬೆರೆತ ಕಾವ್ಯ
ಕವನ ಈ ಗೆಲುವ ಕೂಸು
ಕವಿಯ ನೀ ಕಾಡಿ ಹರಸು.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್