ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ !

ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ !

ಬರಹ

೧೮೫೧ ರಲ್ಲಿ ಮಿಸ್ಸೂರಿರಾಜ್ಯದ ವಿಶ್ವವಿದ್ಯಾಲಯ "ಫುಲ್ಟನ್ ವಿಶ್ವವಿದ್ಯಾಲಯದ ಹೆಸರನ್ನು ಪಡೆಯಿತು. ನಂತರ ಕಾಲಕ್ರಮೇಣ ಇದರ ಹೆಸರನ್ನು, ’ದ ವೆಸ್ಟ್ ಮಿನ್ಸ್ಟರ್ ಕಾಲೇಜ್,’ ಯೆಂದು ಬದಲಾಯಿಸಲಾಯಿತು. ಈ ಖಾಸಗೀ ವಿಶ್ವ ವಿದ್ಯಾಲಯದಲ್ಲಿ ಹುಡುಗ-ಹುಡುಗಿಯರಿಗೆ, ಸಹವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಸಕ್ಕೆವ್ಯವಸ್ಥೆಕಲ್ಪಿಸಿದ್ದಾರೆ. ಮುಕ್ತಮನಸ್ಸಿನ, ಕಲೆಸಾಹಿತ್ಯಗಳಿಗೆ ಪ್ರಾಮುಖ್ಯತೆ ಕೊಡುತ್ತದೆ. ಶಿಕ್ಷಕ-ವಿದ್ಯಾರ್ಥಿಯರ- ಅನುಪಾತ ೧ : ೧೪ ರಷ್ಟಿದೆ. ೧೩,೦೦೦ ಜನವಾಸಿಸುವ ಫುಲ್ಟನ್ ಹಳ್ಳಿ ಕೊಲಂಬಿಯಕ್ಕೆ ೨೫ ಮೈಲಿದೂರದಲ್ಲಿದೆ. ಇಲ್ಲಿಂದ ಜೆಫರ್ಸನ್ ಸಿಟಿಗೂ ಅಷ್ಟೇದೂರ. ಬ್ರಿಟಿಷ್ ಸಾಮ್ರಾಜ್ಯದ ರಾಜಕೀಯಪಟು, ೨೦ನೆಯ ಶತಮಾನದ ಅತ್ಯಂತ ದಕ್ಷ ಹಾಗೂ ಧೀರ ದೇಶನಿರ್ಮಾಪಕ, ೨ ನೆಯ ವಿಶ್ವ ಯುದ್ಧದಲ್ಲಿ ಅವರು ನೀಡಿದ ನಾಯಕತ್ವ, ಪ್ರಧಾನಿಯಾಗಿ, ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ ರವರ ಸ್ಮರಣಮಂದಿರವಿದೆ. ವಿಖ್ಯಾತ ’ಸೇಂಟ್ ವರ್ಜಿನ್ ಮೇರಿ ಚರ್ಚ್ ಪಕ್ಕದಲ್ಲಿದೆ. ಕ್ರಿಸ್ಟೋಫರ್ ರೆನ್ ಎಂಬುವರು, ವಿಶ್ವಯುದ್ಧದಲ್ಲಿ ವಿನಾಶದಹಂತದಲ್ಲಿದ್ದ ೧೭ನೇ ಶತಮಾನದ, ’ಸೇಂಟ್ ವರ್ಜಿನ್ ಮೇರಿ ಚರ್ಚ್ ನ್ನು’, ಲಂಡನ್ ನಲ್ಲಿ ಮರು-ಸ್ಥಾಪಿಸಿದರು.

ರೆನ್ ಗ್ರೇಟ್ ಬ್ರಿಟನ್ ನಲ್ಲಿ ಸುಮಾರು ೫೩ ಚರ್ಚ್ ಗಳನ್ನು ನಿರ್ಮಿಸಿ ಎಲ್ಲರ ಪ್ರಸಂಶೆಗೆಪಾತ್ರರಾಗಿದ್ದರು. ಆದರೆ ಪುನಃ ೧೯೪೧ ರಲ್ಲಿ ಬ್ರಿಟನ್ ಮೇಲೆ ಜರ್ಮನ್ ದೇಶದ ಬಾಂಬ್ ದಾಳಿಯಿಂದ ಅನೇಕ ಕಟ್ಟಡಗಳು ಸ್ಮಾರಕಗಳೂ ನೆಲಸಮವಾದವು. ಅವುಗಳಲ್ಲಿ ಮೇರಿ ಚರ್ಚ್ ಕೂಡ ಒಂದು. ನಾಶವಾಗಿ, ಅದು ಸಂಪೂರ್ಣವಾಗಿ ನಾಶಗೊಂಡಿತು. ಅಮೆರಿಕದೇಶದ ಸ್ಸೂರಿರಾಜ್ಯದಲ್ಲಿರುವ ಫುಲ್ಟನ್ ನಲ್ಲಿನ, ವೆಸ್ಟ್ ಮಿನ್ಸ್ಟರ್ ಕಾಲೇಜಿನ ಒಳ ಆಂಗಣದಲ್ಲಿ ಲಂಡನ್ ನಿಂದ ಕಟ್ಟಡದ ಪ್ರತಿಕಲ್ಲುಗಳು ಹಾಗೂಅಲ್ಲಿ ಕಗೆ-ಸಿಕ್ಕ ಅವಶೇಷಗಳನ್ನು ತಂದು, ಮರಮುಟ್ಟುಗಳನ್ನು ಅತ್ಯಂತ ಎಚ್ಚರಿಕೆಯಿಂದ ತಂದು ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ ಗ್ರಾಮದ ಪ್ರಾಂಗಣದಲ್ಲಿನ ವಿಶಾಲ ಮೈದಾನದಲ್ಲಿ ಸ್ಥಾಪಿಸಿದರು. ಆಲ್ಡರ್ಮನ್ ಬರಿ, ೧೭ ನಿದನ್ನು ಕಟ್ಟಲು ಪ್ರೇರಣೆಯೆಂದರೆ, ವಿನ್ ಸ್ಟನ್ ಚರ್ಚಿಲ್ಲರ ಸ್ಮಾರಕವನ್ನು ಚರ್ಚ್ ನ ಕೆಳಮಹಡಿಯಲ್ಲಿ ಸ್ಥಾಪಿಸಲಾಯಿತು. ಹಾಗೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು. ಅದರಹತ್ತಿರವೇ ಚರ್ಚಿಲ್ಲರ ಅತಿ ಪ್ರತಿಭಾನ್ವಿತ-ಮೊಮ್ಮಗಳಾದ, ಎಡ್ವಿನಾಸ್ಯಾಂಡೀಸ್ ಳ ಬರ್ಲಿನ್ ವಾಲಿನ ನಿರ್ಮಾನ ಏಳು ಗಳೈಂದ ಚರ್ಚಿಲ್ ಕಬ್ಬಿಣದ ತೆರೆಯೆಂದು ವರ್ಣಿಸಿಮಾಡಿದ ಭಾಷಣದ ಧ್ವನಿ-ಸುರಳಿಯನ್ನು ಈಗಲೂ ನಾವು ಸ್ಪಷ್ಟವಾಗಿ ಆಲಿಸಬಹುದು. ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ ರವರಿಗೆ ಅಮೆರಿಕ ಸರ್ಕಾರ ಗೌರವಸದಸ್ಯತ್ವವನ್ನು ಕೊಟ್ಟು ಆದರಿಸಿ ಗೌರವಿಸಿತು !

ಚರಿತ್ರೆಯ ಪುಟಗಳಲ್ಲಿ ಈಗಾಗಲೇ ದಾಖಲಾಗಿರುವ ಅನೇಕಾನೇಕ ಸಂಗತಿಗಳನ್ನು ವಿವರಿಸುವಂತಹ ಸನ್ನಿವೇಷಗಳನ್ನು ವೀಕ್ಷಕರು ಅವಲೋಕಿಸಲು ಅನುವುಮಾಡ್ಕೊಟ್ಟಿದ್ದಾರೆ. ಪುಸ್ತಕಗಳು, ಅವರು ಬಳಸುತ್ತಿದ್ದ ವಸ್ತುಗಳ ಸಂಗ್ರಹಗಳು, ಇತ್ಯಾದಿ. ಗೆಳೆಯರಿಗೆ ಕೊಡಲು ಅನೇಕ ಉಡುಗೊರೆಸಾಮಾನುಗಳು ಲಭ್ಯ. ವೆಸ್ಟ್ ಮಿನ್ಸ್ಟರ್ ಕಾಲೇಜ್, ಗೆ ಬಂದು ಮಾರ್ಗರೆಟ್ ಥ್ಯಾಚರ್, ರೋನಾಳ್ಡ್ ರೀಗನ್, ಮಿಖೇಲ್ ಗರ್ಬಚಾವ್ ರವರ ಭಾಷಣಗಳ ತುಣುಕುಗಳ ಟೇಪ್ ಗಳನ್ನು ಕೇಳಬಹುದು.

ಸೇಂಟ್ ವರ್ಜಿನ್ ಮೇರಿ ಚರ್ಚ್ ನಲ್ಲಿ ಅನೇಕ ವಿವಾಹಗಳಾಗಿವೆ, ಕವಿ ಮಿಲ್ಟನ್ ಈ ಚರ್ಚ್ ನಲ್ಲೇ ವಿವಾಹವಾದರು. ಈಗಲೂ ಯಾರಾದರೂ ವಿವಾಹವಾಗಲು ಇಚ್ಛಿಸುವವರು ಅಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದು.

’ಬ್ರೇಕ್ ಥ್ರೂ’ ಎಂಬ ಶಿಲ್ಪವಿನ್ಯಾಸ :

ಫೋರ್ಡ್, ಬುಷ್, ಡಾ. ಮೇಜರ್, ಶೀತಯುದ್ಧದ ಪರಿಸಮಾಪ್ತಿಯ ದ್ಯೋತಕವಾಗಿ, ಕಬ್ಬಿಣದ ತೆರೆಸರಿದ ದಲ್ಲಿ, ನವ್, ೯, ೧೯೮೯ ರಲ್ಲಿ ಜರ್ಮನ್ ವಾಲ್ ಬೀಳಿಸಿದ ಸವಿ-ಗಳಿಗೆಯಲ್ಲಿ ರೀಗನ್ ರವರಿಂದ ಉದ್ಘಾಟನೆ,. ೧೧ ಅಡಿ ಎತ್ತರ, ೩೨ ಅಡಿ ಉದ್ದದ, ೮ ಕಡೆಗಳಲ್ಲಿ ಹೆಕ್ಕಿ ಆರಿಸಿಕೊಂಡುಬಂದು ಸ್ಥಾಪಸಿದ್ದಾರೆ.

ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ :

ತಂದೆ, ರ್ಯಾಂಡಾಲ್ಫ್, ಚರ್ಚಿಲ್, ಕನ್ಸರ್ವೇಟಿವ್ ಪಕ್ಷದ ರಾಜಕಾರಿಣಿ, ಲಂಡನ್ ನಗರದ, ಬ್ಲೆನ್ ಹೇಮ್ ಅರಮನೆ, ವುಡ್ ಸ್ಟಾಕ್ ನಲ್ಲಿ ೩೦ನೇ ನವೆಂಬರ್, ೧೮೭೪, ರಲ್ಲಿ ಜನಿಸಿದರು. ತಾಯಿ, ಜೆನ್ನಿ ಜೆರೋಮ್, ಅಮೆರಿಕದ, ನ್ಯೂಯಾರ್ಕ್ ನಗರದ ವ್ಯಾಪಾರಿ, ಲೆನಾರ್ಡ್ ಜೆರೋಮ್ ರವರ ಮಗಳು.

ವೀಕ್ಷಕರಿಗೆ ಮೀಸಲಾಗಿಟ್ಟಿರುವ ಸಮಯ :

ಪ್ರಾತಃಕಾಲ ೧೦ ರಿಂದ-ಮಧ್ಯಾನ್ಹ ೪-೩೦ ರ ವರೆಗೆ.