ಮುಂಜಾನೆಯ ಮಂಜು

ಮುಂಜಾನೆಯ ಮಂಜು

ಕವನ

ಮುಂಜಾನೆಯೊಳು ಮಂಜಿನ ಹನಿಗಳು

ಸುಂದರ ಬಲೆಯನು ಹೆಣೆದಿರಲು

ಚಳಿಯನು ಸುತ್ತಲು ಹರಡಿದೆ ಇಳೆಯೊಳು

ತಂಗಾಳಿಯದು ಬೀಸಿರಲು

 

ಹೊನ್ನಿನ ಕಿರಣವ ಚೆಲ್ಲುತ ನೇಸರ

ಮೂಡಿದ ಬಾನಿನ ಬಯಲಿನೊಳು

ಬಿಸಿಲಿನ ತಾಪಕೆ ಕರಗಿದ ಇಬ್ಬಲಿ

ಹೂವಿನ ದಳದಲಿ ಮುತ್ತುಗಳು

 

ನೀಲಿಯ ಗಗನವ ಚುಂಬಿಸಲಾಸೆಯೆ

ಹಕ್ಕಿಯ ಗುಂಪಿನ ಮೆರವಣಿಗೆ

ಬೆಳಗಿನ ಚೆಲುವನು ನೋಡುತ ಮೈಮನ

ಮನವಿದು ಬಯಸಿತು ಬರವಣಿಗೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್