ಮುಂಬೈನಲ್ಲೀದ್ದೀರಲ್ವಾ ಇದ್ಗೊತ್ತೇನ್ರಿ ?

ಮುಂಬೈನಲ್ಲೀದ್ದೀರಲ್ವಾ ಇದ್ಗೊತ್ತೇನ್ರಿ ?

೧. ಘಾಟ್ಕೋಪರ್  ಪಶ್ಚಿಮದಲ್ಲಿ ಒಂದು ಹೊಸ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖೆ'  ಶುರುವಾಗಿದೆ. (ಸುಮಾರು ೨ ತಿಂಗಳ ಹಿಂದೆ) 



 
ಇದು ಸೋಮವಾರ ಬಂದಿರುತ್ತೆ. 
 
'ಶನಿವಾರ ಫುಲ್ ಡೇ  ತೆರೆದಿರುತ್ತೆ'.
 
ಮತ್ತೆ  'ಆದಿತ್ಯವಾರ ಅರ್ಧ ದಿನ ಕೆಲಸಮಾಡುತ್ತೆ'. 
 
ನೋಡಿ ನಿಮಗೆ ಅನುಕೂಲವಾದಲ್ಲಿ ಬಳಸಿ ಅಯ್ಯ !

ಇದು ಎಲ್ಲಿದೇ ಅಂದ್ರೆ :

ಘಾಟ್ಕೊಪರ್ ಪಶ್ಚಿಮದಲ್ಲಿ ಲೋಕಲ್ ರೈಲಿನಿಂದ ಇಳಿದರೆ, ಎದುರಿಗೆ 'ಹಿಂದ್ ಸಭಾ ಆಸ್ಪತ್ರೆ' ಇದೆ. ಅದರ ಪಕ್ಕದಲ್ಲಿ ಒಂದು ಚಿಕ್ಕ ಗಲ್ಲಿ ಇದೆ. ಅದೇ ಗಲ್ಲಿ ಒಳಗೆ  ಸ್ವಲ್ಪ ಮುಂದೆ ಹೋದರೆ, ನಿಮಗೆ  'ಕಾಂಪೌಂಡ್ ಇರೋ ಬಿಲ್ಡಿಂಗ್' ಇದೆ. ಅದೇ ನಮ್ಮ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದ ಘಾಟ್ಕೊಪರ್ ಪಶ್ಚಿಮದ  ಎಮ್. ಜಿ. ರೋಡ್  ಶಾಖೆ'.
 
Address :
 
(60203) M.G. Road Branch, Ghatkopar (West) Mumbai
Koteshwar Dham, Ground Floor, Shop No. 1,2, 3 & 4Sanitorium Lane, 
Behind Hindu Sabha Hospital Ghatkopar-W-400086

೨. ಮತ್ತೊಂದು ವಿಷಯ :

ಈಗ ಬೋರಿವಲಿ ಸ್ಟೇಷನ್ ನಲ್ಲಿ ನೀವು 'ರಾಜಧಾನಿ ಎಕ್ಸ್ ಪ್ರೆಸ್ ರೈಲು' ಹತ್ತಿ ಮುಂದೆ ಪ್ರಯಾಣಿಸಬಹುದು.
 
'ಬಾಂಬೆ ಸೆಂಟ್ರೆಲ್' ಗೆ ಬರುವ ಅಗತ್ಯವಿಲ್ಲ. 
 
ಇದು ಮುಂಬೈನ ಲೋಕಲ್  ನ್ಯೂಸ್ ಪೇಪರ್ ನಲ್ಲಿ ಬಂದಿತ್ತು. ನಾನು ತಮ್ಮ ಗಮನಕ್ಕೆ ತಂದೆ ಅಷ್ಟೆ. 

ನಿಮಗೆ ಉಪಯೋಗ ಆಯ್ತಾ .... ಇಲ್ಲವಾ ತಿಳಿಸಿ..

 

Comments

Submitted by venkatesh Mon, 02/25/2013 - 09:55

ನಮ್ಮನೇಲಿ ಇದನ್ನೇ ಹೇಳೋದು ನಮ್ಮಪ್ಪ ತಾವು ಬರ್ದಿದ್ದನ್ನ ತಾವೇ ಓದ್ಕೊಂಡು ಸಂತೋಷ ಪಟ್ಕೊತಾರೇ ಅಂತ. ಅದೂ ಸರಿಯೇ. ನನ್ನ ಲೇಖನ ನಾವೇ ಓದ್ದಿದ್ರೆ ಹೇಗೆ ? ಏನು ಲೇಖನಾನೆ ಅಯ್ಯೋ ನಿಮಗೊಂದು ಹುಚ್ಚು. ಫಲಕ. ಯಾರ್ ಓದ್ತಾರ್ರೆ ಹೋಗಿ ಮಾರಾಯ್ರೆ ! ಇಂಟರ್ನೆಟ್ ನಲ್ಲಿ ಬಂಡಿ ಬಂಡಿ ಸರಕು ಬಿದ್ದೆದೆ ಅದನ್ನೇ ಓದಕ್ಕಾಗಿಲ್ಲ ಇನ್ನ ನಿಮ್ಮ ಈ ಕೊಸರುಪುರಾಣನ ಓದಕ್ಕೆ ಟೈಮ್ ಎಲ್ರಿ ಸ್ವಾಮಿ ? ಹೌದು. ಇದೂ ಸರಿನೇ !!