'ಮುಂಬೈನ ಸ್ವಾಮಿನಾರಾಯಣ್ ಮಂದಿರ್' !
ವಿಶ್ವದಾದ್ಯಂತ ಪಸರಿಸಿರುವ 'ಸ್ವಾಮಿನಾರಾಯಣ್ ಮಂದಿರ್' ಗಳ ವಿಶಿಷ್ಟತೆ ಅಪಾರವಾಗಿದೆ. ಅತಿ ಭವ್ಯ ಹಾಗೂ ಮನಮೋಹಕ ಕೆತ್ತನೆಕೆಲಸಗಳ ಕಣಜವಾಗಿರುವ ಹೊಸದೆಹಲಿಯ 'ಅಕ್ಷರ್ ಪುರುಷೋತ್ತಂ ಮಂದಿರ್' ಕಣ್ಣಾರೆ ಕಂಡೇ ಅದರ ಮೆರುತ್ವವನ್ನು ಕಾಣಬೇಕು ! ಮತ್ತೆ ನಾವು ನೋಡಿದ ಮತ್ತೊಂದು 'ಸ್ವಾಮಿನಾರಾಯಣ್ ಮಂದಿರ್' ಟೊರಾಂಟೋನಗರದ್ದು. ಅದು ಇಟಲಿಯಿಂದ ಆಮದಾದ ಅತಿಸುಂದರ ಹಾಲುಬಿಳುಪಿನ ಅಮೃತಶಿಲೆಯಲ್ಲಿ ಕೆತ್ತಲ್ಪಟ್ಟಿದೆ. ಅಮೇರಿಕಾದ 'ಅಟ್ಲಾಂಟ ಪ್ರಮುಖನಗರದಲ್ಲಿರುವ 'ಸ್ವಾಮಿನಾರಾಯಣ್ ಮಂದಿರ್,' ಬಹುಶಃ ವಿದೇಶಗಳಲ್ಲಿ ಕಟ್ಟಿರುವ ಮಮ್ದಿರಗಳಲ್ಲೆಲ್ಲಾ ಅತಿ ದೊಡ್ಡದೆಂಬ ಪ್ರತೀತಿಯಿದೆ.
ಮುಂಬೈ ಮಹಾನಗರದಲ್ಲೂ ಸ್ವಾಮಿರಾರಾಯಣ್ ಮಮ್ದಿರಗಳನ್ನು ನಾವು ಘಾಟ್ಕೋಪರ್, ದಾದರ್ ಟಿಟಿಗಳಲ್ಲಿ ಕಾಣಬಹುದು. ಆದರೆ ಅವು ಕಳೆಯ ದೃಷ್ಟಿಯಿಂದ ತೀರಾ ಸಾಮಾನ್ಯ ಮಟ್ಟದವು. ಈ ತರಹದ ಶಿಲ್ಪಕಲೆಯನ್ನು ನಾವು ಜೈನ ಮಮ್ದಿರಗಳಲ್ಲಿ ಕಾಣಬಹುದು. ಅಲ್ಲಿಯೂ ದೇವಿ ದೇವತೆಗಳ ಪುಥಲಿಗಳು ಗೋಡೆ ಮತ್ತು ಕಂಭಗಳ ಮೇಲೆ ಇರುತ್ತವೆ. ಕೆಲವು ವೇಳೆ ಹಿಂದು ಶಿಲ್ಪವೇ ಅಥವಾ ಜೈನ ಶಿಲ್ಪವೇ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ನಮ್ಮ ಕರ್ನಾಟಕದ 'ಹಳೆ ಬೀಡಿನ ದೇವಾಲಯ'ಗಳಲ್ಲಿಯು ಈ ತರಹದ ಶಿಲ್ಪವಿದೆ.
ಗುಜರಾತಿನ ದೇವಾಲಯಗಳು ಸ್ವಾಮಿನಾರಾಯಣ ಮಂದಿರಗಳ ಪ್ರತಿರುಪವೆಂಬಂತಿವೆ. ಆದರೆ ಆಧುನಿಕ ಯುಗದಲ್ಲಿ ಕಟ್ಟಡಗಳ ಶಿಲ್ಪಿ ಕಲೆ ಅತ್ಯಂತ ಸಂಕೀರ್ಣವಾಗಿರುತ್ತದೆ. ಮೇಲಾಗಿ ಎಲ್ಲವು ವಿಧಿವತ್ತಾಗಿ ವೈಜ್ಞಾನಿಕವಾಗಿ ನಿರ್ಮಿಸಲ್ಪಟ್ಟಿವೆ !
-ಹೊರಂಲವೆಂ
ಘಾಟ್ಕೋಪರ್ (ಪ)
ಮುಂಬೈ-೮೪
ಮೊಬೈಲ್ : ೯೮೬೭೬೦೬೮೧೯