ಮುಂಬೈಮಹಾನಗರದ ಮೈಸೂರ್ ಅಸೋಸಿಯೇಶನ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ !
ಸನ್ . 2013 ರ 'ಮೈಸೂರ್ ಅಸೋಸಿಯೇಷನ್ ಮತ್ತು ಮುಂಬೈ ವಿಶ್ವ ವಿದ್ಯಾಲಯ ಜಂಟಿಯಾಗಿ ಆಯೋಜಿಸುವ' 'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ' ದಲ್ಲಿ ಭಾಷಣ ಮಾಡಲು ಡಾ. ಎಚೆಸ್ವಿಯವರು ಬರಲಿದ್ದಾರೆ. 19-20 ನೆಯ ತಾರೀಖು ಶನಿವಾರ-ರವಿವಾರ ಜರುಗಲಿರುವ ಕಾರ್ಯಕ್ರಮದಲ್ಲಿ ಮೊದಲನೆಯ ದಿನ 'ಆಧುನಿಕ ಕನ್ನಡಕಾವ್ಯ' ಗಳನ್ನು ಕುರಿತು ಮಾತಾಡಲಿದ್ದಾರೆ. ಇದಕ್ಕೆ ಪೂರ್ವ ಭಾವಿಯಾಗಿ ಏನ್.ಕೆ.ಇ. ಎಸ್ . ಶಾಲೆಯ ಮಕ್ಕಳಿಂದ 'ಕಾವ್ಯ ನೃತ್ಯ' ಕಾರ್ಯಕ್ರಮವಿದೆ. 20 ನೆಯ ತಾರೀಖು ರವಿವಾರದಂದು 11 ಗಂಟೆಗೆ 'ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ಇದನ್ನು ಎಚೆಸ್ವಿಯರು ನಡೆಸಿಕೊಡುತ್ತಾರೆ.
ಮೊದಲು 19 ನೆಯ ತಾರೀಖು ಶನಿವಾರದಂದು,
ಬುಕ್ 1- ಡಾ. ಚನ್ನವೀರ ಕಣವಿಯವರು ರಚಿಸಿದ, 'ಬೆಂದ್ರೆ ಕಾವ್ಯ , ಕುಹೂ ಕುಹೂ' (ಬೇಂದ್ರೆ ಸ್ಮಾರಕ ಟ್ರಸ್ಟ್ ಧಾರವಾಡ)
ಬುಕ್ 2- ಡಾ. ಗಿರಿಜಾ ಶಾಸ್ತ್ರಿಯವರ 'ಪುಸ್ತಕ ಮತ್ತು ನವಿಲುಗರಿ' (ಅಭಿನವ ಪ್ರಕಾಶನ, ಬೆಂಗಳೂರು)
20 ನೆಯ ತಾರೀಖು ರವಿವಾರದಂದು
11-30 ಕ್ಕೆ 'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ' :
ವಿಷಯ : 'ನಾನು ಮತ್ತು ನನ್ನ ಸಮಕಾಲೀನರು'
(ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರಿಂದ)
ಮೇಲೆ ತಿಳಿಸಿದ ಎರಡು ದಿನದ ಕಾರ್ಯಕ್ರಮಗಳಿಗೂ ತಮಗೆಲ್ಲಾ ಆದರದ ಸ್ವಾಗತ. ನಿಮ್ಮ ಜೊತೆ ನಿಮ್ಮ ಇಷ್ಟಮಿತ್ರರು ಹಾಗು ಅವರ ಪರಿವಾರದವರನ್ನು ಕರೆತನ್ನಿ. ಧನ್ಯವಾದಗಳು