ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ

ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ

ಬರಹ

ಮುಂಬೈ ನಲ್ಲಿ ಕಳೆದ ವಾರ ನಡೆದ ಭಯೋತ್ಪಾದನೆ ಇಡಿ ದೇಶವನ್ನೇ ತಲ್ಲಣ ಗೊಳಿಸಿದೆ.  ಭಗವಂತನ ದಯೆಯಿಂದ ಅಂತ ಘಟನೆ ಮುಂದೆ ದೇಶದಲ್ಲಿ ಎಲ್ಲೂ ಸಂಭವಿಸದಿರಲಿ ಎಂದು ಪ್ರಾರ್ಥಿಸೋಣ.

ದೇಶಕ್ಕೆ ದೇಶವೇ ಈ ಘಟನೆಯನ್ನು ಖಂಡಿಸಿದ್ದಾರೆ, ಆದರೆ, ಸ್ವಘೋಷಿತ ಬುದ್ದಿಜೀವಿಗಳು, ಪ್ರಗತಿಪರರು, ಕೆಲ "ಇಸಂ" ವಾದಿಗಳು ತುಟಿ ಬಿಚ್ಚದೆ ಮೌನವಾಗಿದ್ದ್ದಾರೆ. ಇವರ ಮೌನಕ್ಕೆ ಕಾರಣ ಏನು ಎಂದು ತಿಳಿಯುವ ಕುತೂಹಲ ನನಗೆ.

ದೇಶದಲ್ಲಿ ಎಲ್ಲೇ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದಾಳಿ, ಹಿಂಸೆ ನಡೆದಲ್ಲಿ, ಅದರ ಪೂರ್ವಪರ ತಿಳಿಯದೆ, ಗಡ್ಡ [ಇದ್ದಲ್ಲಿ] ಟ್ರಿಮ್ ಮಾಡಿಕೊಂದು ಮುಖ ತೊಳೆದು ಪತ್ರಿಕೆ, ಟಿವಿಗಳಿಗೆ ಮನ ಬಂದಂತೆ ಹೇಳಿಕೆ ಕೊಡುವ ಬುದ್ದಿ(?)ಜೀವಿಗಳೆ, ಈಗ ಎಲ್ಲಿದ್ದೀರ? ೩-೪ ವಾರದ ಹಿಂದೆ, ಅಲ್ಪಸಂಖ್ಯಾತರ ವಕ್ತಾರರಂತೆ ವಿಶ್ವವಿದ್ಯಾನಿಲಯ ಒಂದರಲ್ಲಿ ಭಾಷಣ ಮಾಡಿದ ಅನಂತಮೂರ್ತಿಗಳೇ ಈಗೇಕೆ ತಾವು ಇನ್ನು ಬಾಯಿ ಬಿಟ್ಟಿಲ್ಲ?  ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಪೂಜಾಸ್ಥಳಗಳಿಗೆ ಹಲ್ಲೆ ನಡೆದಾಗ ತಕ್ಷಣ ಪ್ರತಿಕ್ರಿಯಸಿದ್ದಿರಲ್ಲ, ಈಗ ಘಟನೆ ನಡೆದು ೧ ವಾರ ಆಗುತ್ತೀದೆ ಎಲ್ಲೂ  ತಮ್ಮ ಅಮೃತವಾಣಿ ಹೊರಗೆ ಬಂದೇ ಇಲ್ಲ? ಚುನಾವಣೆ ಸಮಯದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಪುಕ್ಕಟೆ ಪ್ರಚಾರ ಪಡೆದಿರಲ್ಲ, ಈಗ ದಾಳಿ ನಡೆಸಿದ ಕೋಮಿನ ಜನಕ್ಕೆ ಬುದ್ದಿವಾದ ಹೇಳಿ ನಿಮ್ಮ ರುಜುವಾತು ಬ್ಲಾಗ್ ನಲ್ಲಿ ಲೇಖನ ಬರೆದು ತಮ್ಮ ಬುದ್ದಿಜೀವಿ ಬುದ್ದಿಯನ್ನು ಋಜುವಾತುಗೊಳಿಸಿ. ಯಾರೋ ಒಂದು ಪುಸ್ತಕ ಬರೆದರೆ ಅದರ ಬಗ್ಗೆ ಉದ್ದುದ್ದ ಬರೆಯುವ ತಾವು ಇಗ ಭಯೋತ್ಪಾದನೆ ಹಾಗು ಅದನ್ನು ನಡೆಸಿದ ಜನಕ್ಕೆ ಬುದ್ದಿಹೇಳಿ?

ನಕ್ಸಲರ ನಾಯಕ, ಸಾಕೇತ್ ರಾಜನ್ ಸತ್ತಾಗ, CIP [citizen initiative for Peace]  ಅನ್ನೋ ಸಂಘಟನೆ ಕಟ್ಟಿ ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಿರಲ್ಲ, ಪ್ರಗತಿ(?)ಪರರೆ, ಈಗ ಯಾಕೆ ಮೌನಿ? ಇಲ್ಲಿ ನಿಮಗೆ ಶಾಂತಿ ಬೇಡವೆ? ಅಥವಾ ನಿಮ್ಮ ಚಟುವಟಿಕೆಗಳು ನಕ್ಸಲರಿಗೆ ಮಾತ್ರ ಸಂಭಂದಿಸಿದ್ದೆ?  ಈಗಲೂ ಪ್ರತಿಭಟಿಸಿ, ನೋಡೋಣ.

 

ಮಾಲೆಗಾಂವ್ ಘಟನೆಯಿಂದ ಹೊಸ ಪದ ಹುಟ್ಟು ಹಾಕಿ , ಮನ ಬಂದಂತೆ ಬರೆದು, ತಮ ಹಿಂದು ವಿರೋಧಿ ನಾಲಿಗೆಯ ಚಪಲ ತೀರಿಸಿ ಕೊಂಡ "ಇಸಂ" ವಾದಿಗಳೆ, ನಿಮ್ಮ "ಇಸಂ"ಗಳು ಒಂದು ಸಮುದಾಯ ನಡೆಸಿದ ಘಟನೆಯನ್ನು ಖಂಡಿಸಿ ಅಂತ ಹೇಳಿಲ್ಲವೆ? ಕೇವಲ ಮಾಲೆಗಾಂವ್ ಘಟನೆಯಿಂದ ಸಂಘಪರಿವಾರ, ಬಿಜೆಪಿ ಎಲ್ಲವನ್ನು ತೆಗಳಿದ ತಾವು, ಈಗ ಯಾಕೆ ಮೌನಿಗಳಾಗಿದ್ದೀರ? ಚಿಂತಕರಂತೆ ಫೋಸ್ ಕೊಟ್ಟ್ಟು ಪತ್ರಿಕೆಗಳಲ್ಲಿ , ಟಿವಿಯಲ್ಲಿ ಮೆರೆಯುವ ನೀವು ನಿಮ್ಮ "ಇಸಂ" ಗಳನ್ನು ಪಕ್ಕಕಿಟ್ಟು ಘಟನೆಯನ್ನು ಖಂಡಿಸುವ ಪ್ರಯತ್ನ ಮಾಡುವಿರಾ?

ತನ್ನೊಬ್ಬ ಅಲ್ಪಸಂಖ್ಯಾತೆ, ಹಾಗಾಗಿ ಮುಂಬೈಯಲಿ ಮನೆ ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದ ಶಬಾನ ಆಜ್ಮಿ ಅವರೆ, ಈಗ ಯಾಕೆ ನಿಮ್ಮ ಸಮುದಾಯದವರೆ ನಡೆಸಿದ ಘಟನೆ ಖಂಡಿಸಿಲ್ಲಾ?

ಮಾತೆತ್ತಿದರೆ ಗುಜರಾತಿನ ಮಾನವ ಹಕ್ಕುಗಳ ಬಗ್ಗೆ ಮಾತಾಡುವ ತೀಸ್ತಾ ಈಗ ಎಲ್ಲೀದ್ದೀರಾ ? ಇಲ್ಲಿ ಆಗಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೋ? ಯಾಕೆ ಯಾರ ವಿರುದ್ದವೂ ತಾವು ಆರೋಪಾ ಹೊರೆಸಿಲ್ಲ? ಇದೇ ಸಾಲಿನಲ್ಲಿ ನಿಲ್ಲುವ ಅರುಂಧತಿ ರಾಯ್, ಬ್ರಿಂದ ಕರಾಟ್ ಈಗ ಎಲ್ಲಿ ಹೋಗಿದ್ದಾರೊ?

ಭಯೋತ್ಪಾದಕರ ಜೊತೆ ಸಂಪರ್ಕ ಇದೆ ಎನ್ನುವ ಆರೋಪದಲ್ಲಿ ವ್ಯಕ್ತಿಯೊಬ್ಬ ಬೇರೆ ದೇಶದಲ್ಲಿ ಬಂದಿಸಲ್ಪಟ್ಟಿದ್ದಕ್ಕೆ ರಾತ್ರಿ ನಿದ್ದೆ ಕೆಡಿಸಿಕೊಂಡ ಪ್ರಧಾನಿಗಳೆ, ಒರಿಸ್ಸಾ ಘಟನೆಯನ್ನು "nation shame" ಎಂದು ವಿದೇಶದಲ್ಲಿ ಸಾರಿದ ಪ್ರಧಾನಿಗಳೆ, ಮುಂಬೈನಲ್ಲಿ ನಡೆದ ಘಟನೆ ಯಾವ ರೀತಿ "shame" ಅಂತ ಹೊಳೆದಿಲ್ಲವೆ? ಘಟನೆಯಲ್ಲಿ ಮಡಿದ ವೀರಯೋಧರ ನೆನಪಿನಲ್ಲಿ ಹಾಯಾಗಿ ನಿದ್ದೆ ಮಾಡಿದ್ದೀರಿ ತಾನೆ?

ಮಂಗಳೂರಿನಲ್ಲಿ ಆದ ಘಟನೆ ಬಗ್ಗೆ, ದೂರದ ದೆಹಲಿಯಲ್ಲಿ , ಗಾಂದಿ ಸಮಾಧಿಯ ಬಳಿ ಪ್ರತಿಭಟನೆ ನಡೆಸಿ ಬಂದಿರಲ್ಲ, ಮಣ್ಣಿನ ಮಗ ದೇವೆ ಗೌಡರೆ, ಈಗ ಪ್ರತಿಭಟನೆ ನಡೆಸಲು ದೆಹಲಿಯ ವಿಮಾನಕ್ಕೆ ಟಿಕೇಟ್ ಸಿಕ್ಕಿಲ್ಲವೇ?

ಭಯೋತ್ಪಾದನೆ, ಯಾರೇ ನಡೆಸಿರಲಿ, ಜಾತಿ/ಮತ/ಧರ್ಮ ಇವುಗಳ ಬೇಧವಿಲ್ಲದೆ ಖಂಡಿಸ ಬೇಕಾದ್ದು  ಎಲ್ಲರ ಆದ್ಯ ಕರ್ತವ್ಯ.  ಅದು  ಆಗದಿದ್ದಲ್ಲಿ, ಇವ ಬುದ್ದಿಜೀವಿ ಬುದ್ದಿಗೆ, ಪ್ರಗಿತಿಪರ ಪ್ರಗತಿಗೆ, "ಇಸಂ"/ವಾದಕ್ಕೆ ಏನೂ ಬೆಲೆ ಇರಲಾರದು.