ಮುಕ್ತಕಗಳು ಮತ್ತು ಗಝಲ್
ಕವನ
ಮತದಾನ ಮಾಡುತಲಿ ಯೋಗ್ಯರನು ಆರಿಸಲು
ಮತದೊಳಗೆ ವಿಷಭಾವ ಕಾಣಿಸದು ನೋಡು|
ಮಿತನುಡಿಯ ಕಲಿಯುತಲಿ ಎಲ್ಲರೊಳು ಬೆರೆಯುತಿರೆ
ಮತಿಯಭೇದವುಯಿರದು --- ಛಲವಾದಿಯೆ||
***
ಹಳೆಯ ಬೇರಿನ ಬಲದಿ ಹೊಸಬೇರು ಚಿಗುರೊಡೆಯೆ
ಕಳೆಯೇರುತಲಿ ಮರವು ಹಸಿರೊಳಗೆ ನಳಿಸೆ|
ಮಳೆಬರುತ ಸೊಬಗಿನಲಿ ನೆಲವೆಲ್ಲ ಕಂಗೊಳಿಸೆ
ಹೊಳೆತುಂಬಿ ಚೆಲುವಾಯ್ತು -- ಛಲವಾದಿಯೆ||
***
ಗಝಲ್
ಮಣ್ಣಿಂಗೆ ಜಾರಿದ ಹೊತ್ತು ನಮ್ಮ ಸಲಹುದೂ ಅಬ್ಬೆ
ಒಡಲೊಳಂಗೆ ಪ್ರೀತಿಯ ತುಂಬಿ ಕೊಡುವುದೂ ಅಬ್ಬೆ
ಪೋಕಲಾಟಿಕೆ ಮಾಡಿದರೆ ಕರೆಸಿ ತಿದ್ದುವುದೂ ಅಬ್ಬೆ
ಚಂದಲ್ಲಿ ತೊಡೆಲಿ ಕೂರಿಸ್ಯೊಂಡು ಉಣಿಸುವುದೂ ಅಬ್ಬೆ
ಹೃದಯದೊಳ ಗುಣವಿದ್ದರೆ ಅಪ್ಪಿ ಮುದ್ದಿಸುವುದೂ ಅಬ್ಬೆ
ನಮ್ಮೊಳ ಹೊಂಗನಸಿನ ಉಸುರ ಬಿತ್ತುವುದೂ ಅಬ್ಬೆ
ಸೈನಿಕರ ನಡೆಯ ಕಲಿಸಿ ತಲೆಯೆತ್ತಿ ನಡೆಸುವುದೂ ಅಬ್ಬೆ
ಬದುಕಿಲಿಪ್ಪ ಒಳ್ಳೆಯ ವಿಚಾರಂಗಳ ತಿಳಿಸುವುದೂ ಅಬ್ಬೆ
ಸತೀಶನ ಸರಿಯಾಗಿ ಜೀವನಲ್ಲಿ ಬೆಂಬಲಿಸುವುದೂ ಅಬ್ಬೆ
ಮಕ್ಕಳ ಏಳಿಗೆಯ ನೋಡಿ ಖುಷಿಯ ಪಡುವುದೂ ಅಬ್ಬೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್