ಮುಕ್ತಕಗಳು ಮತ್ತು ಗಝಲ್

ಮುಕ್ತಕಗಳು ಮತ್ತು ಗಝಲ್

ಕವನ

ಜೀವನದ ಕತೆಗಳನು ಬೆಳಕಿನಲಿ ಓದೋಣ

ಕಾವನವ ಇರುವಾಗ ಒಲುಮೆಯೊಳು ಬದುಕೋಣ

ಸೇವೆಯನು ಮಾಡುತಲಿ ಹಿರಿಯರನು ಸಲಹೋಣ

ಯಾವುದೇ ರೀತಿಯೊಳು ಮನವನ್ನು ನೋಯಿಸದೆ

ಬಾವಿಯೊಳಗಿನ ಕಪ್ಪೆ ನಾವಾಗದೇಯಿರಲು

ದೇವನನು ಭಜಿಸೋಣ --- ಛಲವಾದಿಯೆ ||

***

ಮನವನವು ತಿಳಿಯಾಗೆ ತನುವಿಂದು ಅರಳುವುದು

ಕನಸೆಲ್ಲ ನನಸಾಗಿ ಸಂಭ್ರಮವು ನೋಡು|

ಜನರೆಲ್ಲ ಸೇರುತಲಿ ಖುಷಿಯಿಂದ ಕೇಳುತಲೆ

ಘನಮಹಿಮರಿಗೆ ಗೆಲುವು -- ಛಲವಾದಿಯೆ||

***

ಗಝಲ್

ಹೊನಲು ಬೆಳಕಿನ ನಡುವೆ ನಾನಿರುವೆ ಗೆಳತಿ

ಕನಸು ನನಸಿನ ಬಿಡದೆ ಕಾದಿರುವೆ ಗೆಳತಿ

 

ಬನವು ಹಸಿರಿನ ಹೊದೆಯೆ ಜಾರುವೆಯ ಏಕೆ

ಗುಣಕು ಚೆಲುವಿನ ಕಹಳೆ ಊದಿರುವೆ ಗೆಳತಿ

 

ತನುವು ಒಲವಿನ ಮನೆಯೆ ಆಗಿದೆಯ ಹೇಗೆ

ಹಲವು ಒಡಲಿನ ಒಳಗೆ ಸಾಗಿರುವೆ ಗೆಳತಿ

 

ಮರೆವು ಹುರುಪಿನ ಬಣಕೆ ತಾಗಿದೆಯ ಹೀಗೆ

ಸಿಡುಕು ಮನಸಿನ ಹೊದಿಕೆ ತೆಗೆದಿರುವೆ ಗೆಳತಿ

 

ಇರಲು ಕಡಲಿನ ಅಲೆಗೆ ಹೋಗದೆಯೆ ಈಶ

ಛಲವು ಗೆಲುವಿನ ಬಳಿಯೆ ನಿಂತಿರುವೆ ಗೆಳತಿ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್