ಮುಕ್ತಕಗಳು

ಮುಕ್ತಕಗಳು

ಕವನ

ಸರಿಯಾದ ದಾರಿಯಲಿ ನಡೆಯುತಲೆ ಹೋದಾಗ

ತಿರಿಯದೇ ಬೆಳಗಿದವು ಕಷ್ಟಗಳು ನೂರು।

ಸರಿಯಿರುಳು  ರಸ್ತೆಯಲಿ ಗುಂಡಿಯದು ತಿಳಿಯದಿರೆ

ಕರಿಮೋಡ  ಬದುಕೆಲ್ಲ - ಛಲವಾದಿಯೆ ॥

***

ಭಾವವಿರದೇ ಮನದೊಳಗೆ ಕವಿಯು ಬೆಳೆಯುವನೆ

ಭಾವನೆಯು ಜೊತೆಗೆಯಿರೆ ಸವಿಯಲ್ಲವೆ ।

ಭಾವನಯನದ ನಡುವೆ ಸಾಗುವುದ ತಿಳಿಯುತಿರೆ

ಭಾವಗಾನವು ಇಹುದು - ಒಪ್ಪೇಶ್ವರ॥

***

ಹಂಗುಗಳ ನಡುವೆಯೇ ಬದುಕದಿರು ನನ್ನೊಲವೆ

ಹಿಂಗುಗಳ ತಿಂದವರ ತೆರದಲಿರಬೇಡ।

ಹೊಂಗೆಯಾ ಮರದಡಿಯ ನೆರಳಿನಂತೆಯೆ ಬಾಳು

ಹೊಂಗನಸ ರೀತಿಯಲಿ - ಛಲವಾದಿಯೆ॥

***

ಗೋಮಾಳ ಕಾಯುವರು ಬರದಿರಲು ಸೇವೆಯಲಿ

ಗೋಮುಖರ ನಡುವೆಯೇ ಸಿಲುಕಿರುವೆ ನಾನು ।

ಗೋಮುಗಳ ಜೊತೆಯಲ್ಲೆ ಸಾಗಿದರು ಮನದೊಳಗೆ

ಗೋಮಿನಿಯ ನೆನೆಯುವೆನು - ಛಲವಾದಿಯೆ ॥

***

ಸಾಧನೆಯ ಖುಷಿಯಲ್ಲಿ ಬೀಗದಿರು ಮನದೊಳಗೆ

ಸಾಧಿಪರು ಬರುವಾಗ ದಾರಿಯನು ತೋರು।

ಸಾಧಿಸುವ ಛಲದೊಳಗೆ ಬಾಂಧವರ ಮರೆಯದಿರು

ಸಾಧುಗಳ ಜೊತೆಯಾಗು - ಛಲವಾದಿಯೆ ॥

***

ಉಸಿರಿರುವ ತನಕವೂ ಸಾಗುತಿರು ಬದುಕಿನಲಿ

ಹುಸಿರಾಗ ತೋರದೆಲೆ ಬಾಳಿನೊಳು ನಲಿಯೆ|

ಕುಸಿಯುತಿಹ ಸೌಧಗಳ ತಳದಿಂದ ಕಟ್ಟುತಲಿ 

ಕುಶಿಯಿಂದ ಬಾಳುತಿರು ಛಲವಾದಿಯೆ||

 

-ಹಾ ಮ ಸತೀಶ

 

ಚಿತ್ರ್