ಮುಕ್ತಕಗಳೆ ಹುಷಾರು !

ಮುಕ್ತಕಗಳೆ ಹುಷಾರು !

ಕವನ

ಮುಕ್ತಕಗಳೆ ನಿಮ್ಮನ್ನು ಜನ ನೋಡಿ ನಗುತಿಹರು

ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು

ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು

ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು

 

ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು

ನೇಸರನು ಬಿಟ್ಟಿಹನು ಹೊಂಗಿರಣ ಕಾಂತಿಹನು

ಅದನಾದರೂ ನೋಡಿ ಮುಕ್ತಕವ ಬರೆಯಿರಿಂದು

ಜಗಜನವು ಮೆಚ್ಚುವಂದದಿ ಇರಲೈ ಬರಹವದು

 

ಬರೆದಿರುವ ಮುಕ್ತಕದ ಹಾಳೆಯ ಪ್ರತಿಯನು

ಕತ್ತೆ ಕಿರುಬವು ಕೂಡ ಮೂಸದೈ ನೋಡಿಂದು

ತಿಳಿಹೇಳಲು ನಾನು ಎಷ್ಟರವ ಇಲ್ಲಿಂದು

ಘನ ಪಂಡಿತರ ನಡುವೆ ಸಾಸಿವೆ ಕಾಳಿಂದು

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್