ಮುಕ್ತಕಗಳ ಲೋಕ
ಕವನ
ತಂದೆ ಜೀವದುಸಿರಿರುವಂಥ ದೇವನು ತಿಳಿಯು
ಬಂದು ಕಾಲನು ಹಿಡಿಯು ಅವನ ದಿನವಿಂದು |
ತಂದೆಗಿಂತಲು ಬಳಗ ಬೇಕೆ ನಿನಗೆಂದೆಂದು
ತಂದೆ ಒಲುಮೆಯ ಗಳಿಸೊ --- ಛಲವಾದಿಯೆ||
*
ಬರದಿರುವ ಕನಸುಗಳ ಬಗೆಗೆ ಚಿಂತೆಯು ಬೇಕೆ
ಬರುವಂಥ ಕನಸುಗಳ ಬಳಸಿ ನೀ ಬೆಳೆಯು |
ತರತರದ ಕಷ್ಟಗಳ ಎದುರಿಸುತ ಬೆಳಗುತಲಿ
ಚಿರಕಾಲ ಬಾಳು ನೀ --- ಛಲವಾದಿಯೆ||
*
ಯೋಗದಿನದೊಳು ನಾವು ಯೋಗಿಯಾಗುತ ಸಾಗೆ
ಯೋಗತನವದು ನಮ್ಮ ತನುವೊಳಗೆ ಸೇರೆ|
ಭೋಗ ಅತಿ ಭೋಗಗಳು ಕಳಚಿ ದೂರದಿ ಬೀಳೆ
ಯಾಗ ಮಾಡಿದ ಫಲವು -- ಛಲವಾದಿಯೆ ||
*
ಕಷ್ಟ ನಷ್ಟ
ನಿಷ್ಠೂರಗಳು
ಅವಹೇಳನಗಳು
ಎದುರಾದಾಗ
ಮೌನದಿಂದ
ಸಹಿಸು !
ಒಂದು ದಿನ
ಎಲ್ಲವೂ
ಮಂಜಿನಂತೆ
ಕರಗಿ ನೀರಾಗುತ್ತವೆ
ಕತ್ತಲು ಕಳೆದು
ಬೆಳಕಾದಂತೆ
ಬಾಳು
ಬೆಳಗುತ್ತದೆ !!
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಅಂತರ್ಜಾಲ ತಾಣ
ಚಿತ್ರ್
