ಮುಕ್ತಿ ಸಿಗಬಹುದೇ ಅಲ್ಲಿ?

ಮುಕ್ತಿ ಸಿಗಬಹುದೇ ಅಲ್ಲಿ?

ಬರಹ

ಬರಿದೆ ಕ್ಷಮಿಸಿ ಕ್ಷಮಿಸಿ ಎಂಬುವವರ ಕ್ಷಮಿಸಲಾಗದು
ಯಾಚನೆಯ ಭಾವ ತುಂಬಿರಬೇಕು ಅವರ ಮನದಲ್ಲಿ

ಬರಿದೆ ಕಾಲ್ಮುಟ್ಟಿ ನಮಸ್ಕರಿಸುವವರ ಕ್ಷಮಿಸಿದರಾಗದು
ಹೃದಯವನೇ ತಟ್ಟುವಂತೆ ಹೃದಯ ಅಳುತಿರಬೇಕಲ್ಲಿ

ತನ್ನ ಪಾಪಕರ್ಮಗಳ ಅರಿವು ಆಗದಿರುವವನ ಮನ
ಎಷ್ಟು ಮಾಡಿದರೇನಂತೆ ಪೂಜೆ ಪುರಸ್ಕಾರ ಹವನ?

ಲಂಚದಾಮಿಷವೊಡ್ಡಿ ಜನಮೆಚ್ಚುಗೆಯ ನಿರೀಕ್ಷೆ ಇಲ್ಲಿ
ಹೇಗೆ ಎದುರಿಸಬಹುದು ಭಗವಂತನ ಪರೀಕ್ಷೆ ಅಲ್ಲಿ?

ಅವರಿವರ ಬಾಗಿಲು ತಟ್ಟಿದರೆ ಉಣಲು ಸಿಗಬಹುದು
ಪರಮಾತ್ಮನ ಮುಟ್ಟಲಾಗದಿರೆ ಆತ್ಮ ಕೊರಗಬಹುದು

ಪಾಪಕ್ಕೆ ಪ್ರಾಯಶ್ಚಿತ್ತ ಮಾಡದೇ ಮೆರೆಯಬಹುದಿಲ್ಲಿ
ಭಗವಂತನೇ ಮೆಚ್ಚದಿರೆ ಮುಕ್ತಿ ಸಿಗಬಹುದೇ ಅಲ್ಲಿ?
*************************