ಮುಕ್ತಿ

ಮುಕ್ತಿ

 
ಹಿಂದೂ ಸಂಪ್ರದಾಯದಲ್ಲಿ ವಿಗ್ರಹಾರಾಧನೆಗೆ ಹೆಚ್ಚು ಮಹತ್ವವಿದೆ.  ದೇವತಾ ಪೂಜೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯಗಳು ಇವೆ. ಇವೆಲ್ಲವುಗಳ  ಉದ್ದೇಶ ತಮ್ಮ ದೈನಂದಿನ ಸಮಸ್ಯೆಗಳ ಹೊರತಾಗಿ ಶಾಂತಿ ಸಮಾಧಾನ ಪಡೆಯುವುದಾಗಿದೆ. ಹೆಚ್ಚಿನ ಸಾಧಕರು ಮುಕ್ತಿ ಪಡೆಯಲು ಬಯಸುತ್ತಾರೆ. ಸಾಧಾರಣವಾಗಿ  ಎಲ್ಲರೂ  ಅನುಸರಿಸರಿಸುವ, ಪಾಲಿಸುವ ಸಾಧನವೆಂದರೆ, ಯಜ್ಞ ಅಥವಾ ಪೂಜೆ.ಸಾಂಪ್ರದಾಯಿಕವಾಗಹೇಳಲಾಗಿರುವ  ಮೂವತ್ತುಶಾಸ್ತ್ರವಿಧಿಗಳಲ್ಲಿ  ಪೂಜೆಯುಒಂದು. ಪೂಜೆ ಎಂದರೆ ಗೌರವಿಸುವುದು ಎಂಬಥ೯ವೂ ಇದೆ. ದೇವರ ಪೂಜೆಯು ಷೋಡಶೋಪಚಾರ ಪೂವ೯ಕವಾಗಿರಬೇಕು ಎಂದು ಒಂದು ವರ್ಗದ ಸಾಂಪ್ರದಾಯಿಕ ಪೂಜಾವಿಧಾನ ತಿಳಿಸುತ್ತದೆ. 
ಷೋಡಶೋಪಚಾರಗಳು ಯಾವುವೆಂದರೆ, ಧ್ಯಾನ, ಆವಾಹನ, ಆಸನ, ಪಾದ್ಯ, ಅಘ್ಯ೯, ಆಚಮನ, ಸ್ನಾನ, ಉಪವೀತ, ಗಂಧ, ಅರ್ಚನ, ದೀಪ, ದೂಪ, ನೈವೇದ್ಯ,ತಾಂಬೂಲ,  ನೀರಾಜನ.  ಪೂರ್ಣ ಮನಸ್ಸಿನಿಂದ ಏಕಾಗ್ರಚಿತ್ತವಾಗಿಮಾಡಲಾಗುವ ಪೂಜೆ ಪರಿಪೂಣ೯ವೆನಿಸುತ್ತದೆ, ಈ ರೀತಿಮಾಡುವ  ಪೂಜೆಯೇ    ಭಗವಂತನಿಗೆ ಪ್ರಿಯವಾಗುತ್ತದೆಎಂದುಸಂಪ್ರದಾಯಸ್ಥರುನಂಬುತ್ತಾರೆ . ಈ ರೀತಿಯ ಸಾಂಪ್ರದಾಯಿಕವಾಗಿ ಭಗವಂತನ ಪೂಜೆ   ಮಾಡುವುದರಿಂದ  ನಮ್ಮ ಅನೇಕ ಸಮಸ್ಸೆಗಳು ಪರಿಹಾರವಾಗಿ ಮಾನಸಿಕ ಶಾಂತಿ ಲಭ್ಯವಾಗುತ್ತೆಂದು ನಮ್ಮ ಪೂರ್ವಜರು ನಂಬಿ ನಡೆಸಿಕೊಂಡು ಬಂದಿದ್ದಾರೆ. 
'ಅತಿಥಿ ದೇವೋ ಭವ'' ಮನೆಗೆ ಬಂದ ಅತಿಥಿಗಳನ್ನು ಸತ್ಕಾರ ಮಾಡುವುದು  ಒಂದು ಪೂಜೆಯೇ  ಆಗುತ್ತದೆ ಎಂದು ನಮ್ಮ ಪೂರ್ವಜರು ನಂಬಿದ್ದಾರೆ. ತಂದೆ-ತಾಯಿಗಳಲ್ಲಿ , ಗುರು-ಹಿರಿಯರಲ್ಲಿ   ವಿನೀತವಾಗಿ ನಡೆದುಕೊಳ್ಳುವುದೂ, ಪೂಜ್ಯರಾದವರನ್ನು ಗೌರವಿಸುವ,ಅವರಮಾನಸಿಕ ಶಾಂತಿಯನ್ನು ಕಾಪಾಡುವುದು ಒಂದು ಪವಿತ್ರವಾದ  ಪೂಜೆ.  ಪೂಜೆಯ ಮತ್ತೊಂದಫಲವೇ ವೈರಾಗ್ಯಪ್ರಾಪ್ತಿ. ವೈರಾಗ್ಯದಿಂದ  ಭಗವಂತನಲ್ಲಿ  ಭಕ್ತಿ,  ಭಕ್ತಿಯಿಂದ   ಆತನ  ದಿವ್ಯ  ಅನುಗ್ರಹ ,  ಆ  ದಿವ್ಯಾನುಗ್ರಹದಿಂದ  ಸಂಸಾರಬಂಧನದ  ಮುಕ್ತಿ.  ಹೀಗೆ ಪೂಜಾಕರ್ಮವೂ  ಪ್ರತಿಯೊಬ್ಬರಿಗೂ ಒಂದೊಂದು ವಿಶೇಷವನ್ನು ಸಾದರಪಡಿಸುತ್ತದೆ.  ಜ್ಞಾನಿಗಳು - ಹಿರಿಯರ ಅನುಭವಿಗಳು   ದೇವರ  ಪೂಜೆಯನ್ನು , ದಿನ  ನಿತ್ಯದ   ಕರ್ಮವೆಲ್ಲವೂ  ಪೂಜಾತ್ಮಕವಾಗಿರಬೇಕು ಎಂದುತಿಳಿಸುತ್ತಾರೆ.ಪುರಂದರ ದಾಸರು ಹೇಳುತ್ತಾರೆ  " ಸುಲಭ ಪೂಜೆಯ ಮಾಡಿ ಬಲವಿಲ್ಲದವರು..ಇರುಳು  ಹಚ್ಚುವ ದೀಪ ಹರಿಗೆ ನೀರಾಜನವು ,  ಮನೆಯ ಅಂಗಳ ಉಡುಪಿ ವೈಕುಂಠ , ಹೊರಳಿ ಮಲಗುವುದೆಲ್ಲ ಹರಿಗೆ ಪ್ರದಕ್ಷಿಣೆಯು......... " ಎನ್ನುತ್ತಾರೆ.  
 ಇನ್ನು  ಆದಿಗುರು ಶ್ರೀಶಂಕರರು  "ಹೇ, ಶಿವ   ಆತ್ಮವೇ ನೀನು, ಬುದ್ಧಿಯೇ  ಪಾವ೯ತಿ;  ಪ್ರಾಣಗಳೇ ನಿನ್ನ ಗೆಳೆಯರು; ದೇಹವೇ ಮಂದಿರ; ಇಂದ್ರಿಯಚಟುವಟಿಕೆಗಳೇ ನಿನ್ನ ಪೂಜೆ; ನಿದ್ರೆಯೇ ಧ್ಯಾನ;  ನಡೆದಾಟವೆ ಪ್ರದಕ್ಷಿಣೆ; ಆಡುವ ಮಾತೆಲ್ಲವೂ ನಿನ್ನ ಸ್ತೋತ್ರಗಳು;  ನಾನು ಏನೇನು ಮಾಡುತ್ತೆನೆಯೋ ಅವೆಲ್ಲವೂ ನಿನ್ನ ಆರಾಧನೆಯೇ" ಎನ್ನುತ್ತಾರೆ. ಇನ್ನು ಬಸವಣ್ಣನವರು " ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ," ಎನ್ನುತ್ತಾರೆ
ಹೌದು.  ನಿತ್ಯ ಪೂಜೆಯು ಭಕ್ತಿಯಿಂದ ಪ್ರಾರಂಭವಾಗಿ ಅದೇ ನಮ್ಮ ನಿತ್ಯದ ಬದುಕಾದಾಗ - ಕುಳಿತಾಗ, ನಿಂತಾಗ, ಮಲಗಿದಾಗ, ಭಗವಂತನ ನಾಮಸ್ಮರಣೆ ನಿರಂತರ ಆದಾಗ, ಶೋಡಶೋಪಚಾರದ ಪೂಜೆಯಲ್ಲವು ದಿನ ನಿತ್ಯದ ಬದುಕಿನ ಕರ್ಮದ ಅಂಗವಾಗಿ  ಬಿಡುತ್ತದೆ.  ಆಗ ಭಕ್ತಿಯು ಮುಕ್ತಿಯನ್ನು ಬೇಡುವುದಿಲ್ಲ,   ಕೇವಲ ಭಗವಂತನನ್ನು ಮಾತ್ರ ನಿರಂತರವಾಗಿ  ಬೇಡುವ ಪೂಜೆಯಾಗುತ್ತದೆ. ಈ ರೀತಿಯಾಗಿ ದಿನನಿತ್ಯದ ಅನನ್ಯ  ಭಕ್ತಿಯ ಪೂಜೆ, ನಮ್ಮನ್ನು  ಸಕಲ ಬಂದನಗಳಿಂದ  ಮುಕ್ತಿಗೊಳಿಸಿಬಿಡುತ್ತದೆ.     
https://ssl.gstatic.com/ui/v1/icons/mail/images/cleardot.gif

Comments

Submitted by kavinagaraj Mon, 02/15/2016 - 19:53

ಶ್ರೇಷ್ಠತಮ ಕರ್ಮಗಳು, ಸಮಾಜೋಪಯೋಗಿ ಕಾರ್ಯಗಳೂ ಪೂಜೆಯೇ ಆಗುತ್ತದೆ. ಅಂತರಂಗ ಶೋಧನೆಗೆ ನೆರವಾಗುವಂತಹುದೆಲ್ಲವೂ ಪೂಜೆಯೇ! ಉತ್ತಮ ವಿಚಾರಕ್ಕೆ ಧನ್ಯವಾದಗಳು, ಪ್ರಕಾಶರೇ.