ಮುಖಬಂಗ.........

ಮುಖಬಂಗ.........

ಬರಹ

ನಿನ್ನ ಮೇಲೆ ಕವನ ಬರೆಯಲೆಂದು ಲೇಖನಿ ಹಿಡಿದೆ...
ತೋಚಿದು ಗೀಚುತ್ತಾ ಕುಳಿತೆ....
ಕೂತು ಒಂದು ತಾಸು ಕಳೆದಿದೆ ಆದರೂ ಒಂದು ಪದವನ್ನು ಬರೆಯಲಾಗಲಿಲ್ಲ
ಗೀಚಿ ಗೀಚಿ ಬರೆದ ಹಾಳೆಗಳೆಲ್ಲ ನಾವೆನು ತಪ್ಪು ಮಾಡಿದೆವು
ಎಂದು ಗೋಗರಿಯುತ್ತಿವೆ, ನಾನು ಹಿಡಿದ ಲೇಖನಿ ಇದು ಯಾವ ಜನ್ಮದ ಕರ್ಮವೆಂದು ಬಳಲಿ ಕಣ್ಣೀರನ್ನೆ ಶಾಹಿಯಾಗಿಸಿದೆ.....

ಕೊನೆಗೆ ಆ ಹಾಳೆಯು ಗೋಗರೆವುದನು ನಿಲ್ಲಿಸಿತು,
ಆ ಲೇಖನಿ ಬರೆಯುವುದನೆ ನಿಲ್ಲಿಸಿತು...
ಎಷ್ಟು ಬರೆದರು ಬರೆಯಲಾಗುತ್ತಿರಲಿಲ್ಲ ನಾನು ಬರೆದ ಕವನವನು
ಸಹಿಸಲಾಗದೆ ಅಸುನಿಗಿದವೇನೊ ಎಂಬತೆ ನನಗೆ ಬಾಸವಾಗುತ್ತಿತ್ತು.

ಆಗಾದರೆ ನಾನು ಬರೆದದ್ದಾರು ಏನು....?
ಬರೆದ ಬರಹಕ್ಕೆ ಅರ್ಥವಿರಲಿಲ್ಲ...
ಸರಿಯಾದ ಪದ ಪ್ರಯೂಗವಿರಲಿಲ್ಲ....
ಪದಗಳಲಿ ಅರ್ಥವಿರಲಿಲ್ಲ ಸಾಲುಗಳನ್ನು ಸರಿಯಾಗಿ ಜೋಡಿಸಿರಲಿಲ್ಲ...........

ಅದನು ನಾನ್ನೊಮ್ಮೆ ಓದಿ ಮುಖಬಂಗ ಅನುಭವಿಸಿದೆ............