ಮುಖವಾಡ ತೊಟ್ಟ ಮನವಿದು...
ಕವನ
ಕೇಳು ಮನವೇ ಮುಖವಾಡ ತೊಟ್ಟ ಮನವಿದು
ಯಾರಿಗಾಗಿ ಯಾತಕ್ಕಾಗಿ ಬದುಕಿರುವೆಂಬುದು
ತಿಳಿಯಲಾಗದು ಹಿಂಸಿಸುವವರ ಮದ್ಯದಲ್ಲಿ
ಅರಿಯದೆ ಸಾಗಿದೆ ಬಾಳು ಅರಿತು ಜೊತೆಯಲ್ಲಿ //
ಜಗದಲ್ಲಿ ಸಿಗುವುದು ಬಗೆ ಬಗೆಯ ಮುಖವಾಡ
ತಾನು ತನ್ನತ್ವ ಎಂಬುದ ಮರೆಯುವ ಮುಖವಾಡ
ತನ್ನವರ ಖುಷಿಗಾಗಿ ನನ್ನ ನಗುವಿನ ಮುಖವಾಡ
ನೊಂದ ಮನಕ್ಕೆ ನಾನು ಸಾಂತ್ವನದ ಮುಖವಾಡ //
ಹೂವಿನಂತೆ ಸದಾನಗುತ ಅರಳ ಬೇಕೆಂದಾಗ
ಹೊಸಕಿ ಹಾಕಲು ಕಾಯುವ ಜನರೆ ಇರುವಾಗ
ನಿಸ್ವಾರ್ಥ ಪ್ರೀತಿಗೆ ಮೋಸ ಮಾಡುವರಿರುವಾಗ
ಕಾಣದೆ ಮರೆಯಲ್ಲಿ ಕುಳಿತ ನೀ ಜಾಣನೇ ಸರಿ //
ನೊಂದ ಮನವಿದು ಯಾರನ್ನು ದೂರಲಾರದು
ಎಲ್ಲ ತನ್ನವರೆಂಬ ನಂಬಿಕೆಯೇ ಇರಬಹುದು
ನಂಬಿಕೆಯಲ್ಲಿ ಸೋತರು ಬುದ್ದಿ ಬರಲಾರದು
ಮುಖವಾಡದ ಪ್ರೀತಿಗೆ ಸೋತಿರುವ ಮನವಿದು //
-ಹೇಮಲತಾ, ಜೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್