ಮುಖ್ಯಮಂತ್ರಿ ಯಡಿಯೂರಪ್ಪ v/s ಶಾಂತವೀರಪ್ಪ ಗೌಡ
ಮುಖ್ಯಮಂತ್ರಿ ಯಡಿಯೂರಪ್ಪನವರ ಬಲಗೈ ಬಂಟ, ಸಾಧು ಲಿಂಗಾಯಿತ ಬಣದ ಹಿರಿಯ ಮುಖಂಡ ಶಾಂತವೀರಪ್ಪ ಗೌಡ ಮುಖ್ಯಮಂತ್ರಿಗಳ ಕಾರ್ಯ ವೈಖರಿ ಹಾಗೂ ಅವರ ಪುತ್ರ ಸಂಸದ ರಾಘವೇಂದ್ರರ ವರ್ತ ನೆ ಸರಿಯಿಲ್ಲದ ಕಾರಣ ಎಂದು ಬಿಜೆಪಿ ಪಕ್ಷಕ್ಕೆ ಇತ್ತೀಚೆಗೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇತ್ತೀಚೆಗೆ ನಡೆದಿರುವ ಪಿ.ಎಲ್.ಡಿ ಬ್ಯಾಂಕ್, ಟಿ.ಎ.ಪಿ.ಸಿ.ಎಂ.ಎಸ್ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳು ಮೊನ್ನೆ ನಡೆದ ಚುನಾವಣೆಯಲ್ಲಿ ಪೂರ್ಣ ಬಿಜೆಪಿ ಮಯವಾಗಿದೆ. ಆದರೆ ಇದು ಕಾಂಗ್ರೆಸ್ ಗೆ ಮಾನದಂಡವಲ್ಲ. ಶಿಕಾರಿಪುರದಲ್ಲಿ ಅನೇಕ ಕಾಮಗಾರಿ ನಡೆಯುತ್ತಿದೆಯಾದರೂ ಅದರಲ್ಲಿ ಕೆಲವು ಉತ್ತಮ ಕೆಲವು ಕಳಪೆ ಎನ್ನುವ ಆರೋಪವಿದೆ. ಇದೀಗ ಗ್ರಾ.ಪಂ ಚುನಾವಣೆ ಆಗಮಿಸುತ್ತಿದೆ. ಬಿಜೆಪಿ ಸರ್ಕಾ ರ ಆಡಳಿತವಿರುವುದರಿಂದ ಗ್ರಾ.ಪಂ ಬಿಜೆಪಿ ಪಾಲಾಗಲಿದೆ ಎನ್ನುವುದು ಬಿಜೆಪಿ ಕಾರ್ಯ ಕರ್ತ ರ ಮಾತು, ಹಾಗೇ ಸಾಮಾನ್ಯರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಬಿಜೆಪಿಯವರು ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಅದೂ ಅಲ್ಲದೆ ಹಿರಿಯ ಶಾಂತಣ್ಣ ಕಾಂಗ್ರೆಸ್ ಗೆ ಸೇರ್ಪ ಡೆಯಾಗಿರುವುದರಿಂದ ತಾಲ್ಲೂಕಿನಲ್ಲಿ ಸಾಧು ಲಿಂಗಾಯಿತ ಬಣ ಹೆಚ್ಚಿರುವುದರಿಂದ ನಾವೇ ಹೆಚ್ಚು ಗ್ರಾ.ಪಂಗಳನ್ನು ಗೆಲ್ಲುತ್ತೇವೆ ಎನ್ನುವುದು ಕಾಂಗ್ರೆಸ್ ಕಾರ್ಯ ಕರ್ತ ರ ಮಾತು. ಒಟ್ಟು ಶಿಕಾರಿಪುರ ತಾಲ್ಲೂಕಿನಲ್ಲಿ 44 ಗ್ರಾ.ಪಂ ಗಳಿದ್ದು ಇಲ್ಲಿನ ಫಲಿತಾಂಶ ಏನಾಗಬಹುದು. ಪಕ್ಷ, ಅಭಿವೃದ್ದಿ, ಜಾತಿ, ಹಣ,ಹೆಂಡ ಆಧಾರದ ಮೇಲೆ ಜನ ಯಾವ ಪಕ್ಷಕ್ಕೆ ಮತ ಚಲಾಯಿಸಬಹುದು ನೀವೇ ಹೇಳಿ.