ಮುಖ ಮಾತ್ರ ತೋರುವ ಕನ್ನಡಿ ಇದೆಯಾ ಜಗದಲ್ಲಿ

ಮುಖ ಮಾತ್ರ ತೋರುವ ಕನ್ನಡಿ ಇದೆಯಾ ಜಗದಲ್ಲಿ

ಕನ್ನಡಿ ನೋಡಿ ಕಾವ್ಯ ಬರೆಯಲು ಪ್ರಯತ್ನಿಸಿದೆ,
ಕಾಣದ್ದನ್ನು ಕಂಡಂತೆ ಬರೆಯಲೇ,,,,,,,,,,
ಕಂಡದ್ದನ್ನು ಕಾಣದಂತೆ ಬರೆಯಲೇ,,,,,,,,,
ಕಾವ್ಯವೇಕೆ ಇಷ್ಟು ಬೆತ್ತಲೆ?
 
ಕನ್ನಡಿಯ ಒಳಗೆಲ್ಲೋ,
ನಾನು ನಿನ್ನೆ ಅವಳನ್ನು ನೆನೆದು ಅತ್ತ ನೆನಪು,,,
ಮೊನ್ನೆ ತಾನೇ ನಮ್ಮನೆಯ ಗೂಡು ತೊರೆದ ಹಕ್ಕಿಯ ನೆನಪು
ಬೆಳಿಗ್ಗೆಯ ಸೂರ್ಯನನ್ನು ನೋಡಲಿಲ್ಲವಲ್ಲ ಎನ್ನುವ ತಾಜಾ ನೆನಪು,,,,
ನಾಳೆ ಏನಾಗಬಹುದೋ ಎಂಬ ತಳಮಳದ ತವಕ,,,,
 
ಅಯ್ಯೋ,,,,,,
ನಾನ್ಯಾಕೆ ಕಾಣುತ್ತಿಲ್ಲ ಕನ್ನಡಿಯೊಳಗೆ?
 
ಹುಡುಗಿಯೊಬ್ಬಳು
ಹೊರ ಹೋಗುವ ನೆಪದಲ್ಲಿ,,,,
ಕನ್ನಡಿಯೆದುರಿಗೆ, ತಾನು ಬಯಲಾಗಿ,
ಸೀರೆಯ ನೆರಿಗೆಯಿಂದಾ ಹಿಡಿದು,,,,,
ಕೊನೆಯ ಸ್ಟಿಕ್ಕರಿನ ತನಕ,,,,,
ಕಂಡದ್ದು ಅವಳನ್ನೇನಾ,,,,,,
ಅಥವಾ 
ಅವಳನ್ನು ಭೇಟಿ ಮಾಡಲು ಬರುವ
ಮುಗ್ಧ ಕಂಗಳ ಹುಡುಗನ ಬಾಯಿಯ ಹೊಗಳಿಕೆಯನ್ನಾ!?
 
ನೋಡಿದವನ ಮುಖವನ್ನು 
ಮಾತ್ರ ತೋರಿಸುವ ಕನ್ನಡಿ,,,,,,,
ಇದೆಯೇ ಜಗದಲ್ಲಿ ?