ಮುಗಿದರೆ ಇಹ ವ್ಯಾಪಾರ....

ಮುಗಿದರೆ ಇಹ ವ್ಯಾಪಾರ....

ಕವನ

 

ಮುಗಿಸಿದರೆ ಅವತಾರ
ಇಹ ಲೋಕ ವ್ಯಾಪಾರ
ಸೇರಲೆ ದೇವರ ಪಾದ 
ವೈಕುಂಠಕೈಲಾಸ ಕದ!
 
ಶೋಧ ತ್ರಾಸಕೆ ಮುಕ್ತಿ
ಆತ್ಮನಾಲಯಕೆ ವಿರಕ್ತಿ
ಮುದುಡಿ ಹೂವ್ವ ರೀತಿ
ಮುದುರಿತೆ ಜೀವನಶಕ್ತಿ!
 
ಕೈಲಾಸದಲಿದೆ ವಾಸ 
ಸತ್ಯಲೋಕವೆ ನಿವಾಸ 
ಕ್ಷೀರಸಾಗರ ಪೀಯೂಷ
ಹೀರುವಂತೇ ಭಕ್ತಿ ರಸ!
 
ಹರಿ ಹರ ಪಾದ ದಿವಸ 
ಬ್ರಹ್ಮ ವಾಗ್ವಾದದ ಸ್ಪರ್ಶ
ದೇವಗಣಗಳ ಜತೆ ಹರ್ಷ
ಅಪ್ಸರೆಯರಾಮೋದಕರ್ಷ!
 
ಪಾಪ ಪುಣ್ಯದ ವ್ಯವಹಾರ
ಬೇಡವೊ ನರಕಾಪ್ರಹಾರ
ಮಾನವ ಜನ್ಮದ ನರಕವೆ
ಸಾಕಾಗಿ ನಾ ಬಂದಿರುವೆ!
 
------------------------------------------------------------------------------------
ನಾಗೇಶ ಮೈಸೂರು, ೧೨.ಮಾರ್ಚ್.೨೦೧೩, ಸಿಂಗಾಪುರ
------------------------------------------------------------------------------------