ಮುಗಿಯುವುದಿಲ್ಲ ಬದುಕು
ಆಕೆ ಅತ್ಯಂತ ಚುರುಕಾದ ಹುಡುಗಿ , ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಮಾತು ಕೆಲವೊಮ್ಮೆ. ಯಾವಾಗಲು ನಗುಮೊಗ. ನನ್ನ ಸಹದ್ಯೋಗಿ ಆಗಿದ್ದ ಆಕೆ ಎಂದಿಗೂ ಎತ್ತರದ ದನಿಯಲ್ಲಿ ಮಾತನಾಡಿದ್ದಿಲ್ಲ. ೨-೩ ವರ್ಷ ಜೊತೆಗೆ ಕೆಲಸ ಮಾಡಿದ್ದರೂ ಆಕೆ ತನ್ನ ವಯ್ಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಿರಲಿಲ್ಲ.ತೀರ ಕೇಳಿದಾಗ ಚುಟುಕಾಗಿ ಉತ್ತರಿಸಿ ಸುಮ್ಮನಾಗುತ್ತಿದ್ದಳು
. ಹೀಗಿರುವಾಗ,ಒಂದು ದಿನ ಅವಳ ನೆಡವಳಿಕೆ ಏರು-ಪೆರದಂತೆ ನನಗನ್ನಿಸಿತು.ಹಾಗೆ ಅನಿಸಿದ ೨ ತಿಂಗಳಲ್ಲೇ ಕಂಪನಿ ಅವಳನ್ನು ಏನೋ ನೆಪ ಒಡ್ಡಿ ಕೆಲಸದಿಂದ ತೆಗೆಯಿತು. ವಿಶ್ರಾಂತಿಗೆಂದು ಊರಿಗೆ ತೆರಳಿದ್ದೆ, ಬೇರೆ ಕೆಲಸ ಸಿಕ್ಕಿದ್ದರಿಂದ ವಾಪಸ್ಸಾದೆ, ಎಂದಷ್ಟೇ ತಿಳಿಸಿ ಕಾಲ್ ಕಟ್ ಮಾಡಿದ್ದಳು. ಅವಳು ವಯ್ಯಕ್ತಿಕ ವಿಚಾರ ಹೇಳ ಬಯಸುವುದಿಲ್ಲ ಎಂದು ಗೊತ್ತಿದ್ದರಿಂದ ನನ್ನ ಕುತೂಹಲಗಳಿಗೆ ಬ್ರೇಕ್ ಹಾಕಿ ಸುಮ್ಮನಾಗಿದ್ದೆ. ಬೇರೆ ಕೆಲಸ ಹುಡುಗಿ ಬ್ಯುಸಿ ಇರಬೇಕು ಅಥವ ನನ್ನ ಮರೆತಿರಬೇಕು ಎಂದು ಅವಳ ಚಿಂತೆ ಬಿಟ್ಟಿದ್ದೆ.
ಆದರೆ ಒಂದು ದಿನ ಇದ್ದಕಿದ್ದಂತೆ ಅವಳ ಸಾವಿನ ಸುದ್ದಿ ನನ್ನ ಮುಟ್ಟಿತ್ತು. ಹುಡುಗಿ ಬದುಕಿಗೆ ವಿದಾಯ ಹೇಳಿ ಹೊರಟು ಹೋಗಿದ್ದಳು. ಆತ್ಮಹತ್ಯೆ ಮಾಡಿಕೊಂಡಿದ್ದಳು. ಎಷ್ಟೆಲ್ಲಾ ಓದಿದ್ದ ಹುಡುಗಿ,ತನ್ನಲ್ಲೇ ಹುಟ್ಟಿ ಅಲ್ಲೇ ಕೊನೆಯಾದ, ಎಂದೂ ವ್ಯಕ್ತವಾಗದ ಪ್ರೀತಿಯ ಜಾಡು ಹಿಡಿದು ಈ ಲೋಕವನ್ನೇ ತ್ಯಜಿಸಿ ಹೊರಟು ಹೋಗಿದ್ದಳು. ತೀರ ತನ್ನ ಆತ್ಮೀಯ ಸ್ನೇಹಿತೆಯರಿಗೂ ತನ್ನ ಪ್ರೀತಿಯ ವಿಷಯ ಆಕೆ ಬಿಟ್ಟುಕೊಟ್ಟಿರಲಿಲ್ಲ. ನಾನೇನೋ ಸಹೋದ್ಯೋಗಿ ಜೊತೆಗೆ ಓದಿದ ಅವರಿಗೇನಾದರೂ ಗೊತ್ತೇ ಎಂದು ವಿಚಾರಿಸಿದಾಗ ತಿಳಿದಿದ್ದು ಮೇಲಿನ ಸಂಗತಿ. ಯಾರೊಂದಿಗೂ ತನ್ನ ನೋವು - ನಲಿವು ಹಂಚಿಕೊಳ್ಳದ ಆಕೆಯ ಸ್ವಾಭಿಮಾನ ಸ್ವಲ್ಪ ಜಾಸ್ತಿಯೇ ಆಯಿತು ಎನಿಸಿತು.
ನೆಡವಳಿಕೆ ಏರು- ಪೇರಾಯಿತು ಎಂದೆನಲ್ಲ, ಆಗಲೇ ಬಹುಷಃ ಆಕೆ ತೇವ್ರ ಖಿನ್ನತೆಗೆ ಒಳಗಾಗಿದ್ದಳು ಎನಿಸುತ್ತದ್ದೆ ನನಗೆ.. ಎಲ್ಲ ತಿಳಿದರೂ ಮನೆತನದ ಮಾನ - ಮಾರ್ಯದಿಗೆ ಅಂಜಿ ಈಗ ಇದ್ದೊಬ್ಬಳು ಮಗಳೂ ಇಲ್ಲದೆ ಅವಳ ತಂದೆ ತಾಯಿಯನ್ನು ನೋಡಿದರೆ ಮನಸ್ಸು ಚುರ್ ಎನ್ನುತ್ತದೆ.. ನನಗೆ ಇದ್ದೊಬ್ಬ ಮಗಳಿಗಿಂತ ಯಾವುದು ಮುಖ್ಯ ಎನಿಸಲಿಲ್ಲ.. ಇಷ್ಟಕ್ಕೂ ಅಲ್ಲಿ ಮರ್ಯಾದೆ ಹೋಗುವಂತದ್ದೇನು ಇರಲಿಲ್ಲ, ಭಾವನೆಗಳ ಹೊಡೆತಕ್ಕೆ ಆಕೆ ಕುಗ್ಗಿ ಹೋಗಿದ್ದಳು.. ಅವರ ಪುಟ್ಟ ಹಳ್ಳಿಯಲ್ಲಿ ಅದು ದೊಡ್ಡ ವಿಷಯ ಒಪ್ಪುತ್ತೇನೆ, ಆದರೆ ಚಿಕಿತ್ಸೆ ಅಸಾಧ್ಯವೇನೂ ಆಗಿರಲಿಲ್ಲ..
ಕಟ್ಟಡ, ಸೇತುವೆ, ಆಣೆಕಟ್ಟು ಎಲ್ಲವನ್ನು ಕಟ್ಟುವುದ ಕಳಿಸಿದ ಆಕೆಯ ಡಿಗ್ರಿಗಳು , ಅವಳ ದುಃಖಗಳಿಗೊಂದು ಆಣೆಕಟ್ಟು ಕಟ್ಟಿ , ಬರಡಾದ ಬದುಕನ್ನು ಹಸಿರಾಗಿಸಿವುದನ್ನು ತಿಳಿಸಿರಲಿಲ್ಲ.. ಸೋತಾಗ ಎದುರಿಸುವ ಧೈರ್ಯ ತುಂಬಿರಲಿಲ್ಲ ..ಹೊರಾಡುವ ಹಠ ಕಲಿಸಿರಲಿಲ್ಲ...ಅವಳ ಸಾಲು ಸಾಲು ಡಿಗ್ರಿಗಳು ಆ ಕ್ಷಣಕ್ಕೆ ಅವಳೊಟ್ಟಿಗೆ ಮಣ್ಣಾದಂತೆ ನನಗನಿಸಿತು..
ನಮ್ಮ ಶಿಕ್ಷಣ ನಮ್ಮೊಳಗೊಂದು ನೈತಿಕ ಸ್ಥೈರ್ಯವನ್ನು ಹುಟ್ಟುಹಾಕುತ್ತಿಲ್ಲವೆ...?? ಸೋತಾಗ ಗೆಲ್ಲಲೇಬೇಕೆಂಬ ಹಟವನ್ನು, ಗೆಲ್ಲುತೀನೆಂಬ ಆತ್ಮವಿಶ್ವಾಸವನ್ನು ತುಂಬುತ್ತಿಲ್ಲವೆ...??
ತಂದೆ - ತಾಯಿಗಳು ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸುತಿದ್ದಾರೆ. ನನ್ನ ತಂದೆ- ತಾಯಿಗಳು ಸಹ ಇದಕ್ಕೆ ಹೊರತೇನಲ್ಲ. ಓದು, ಮೊದಲುಬಾ, ಇಂಜಿನಿಯರ್ಆಗು..ತಪ್ಪಲ್ಲ.. ಆದರೆ ಇವುಗಳ ಜೊತೆಗೆ ಸೋಲು, ಹತಾಶೆ, ದುಃಖ , ಅವಮಾನ ಎದುರಿಸುವ ಧೈರ್ಯ ತುಂಬಬೇಕಿದೆ .. ಬಯಸಿದ ಬದುಕು ಸಿಗದಿದ್ದಾಗ , ಬರಲೇ ಎಂದು ಬಾಗಿಲಲ್ಲಿ ನಿಂತಿರುವ ಬದುಕನ್ನು ಮುಗುಳ್ನಕ್ಕಿ ಸ್ವಾಗತಿಸುವುದನ್ನ ಕಲಿಸಬೇಕಿದೆ...
Comments
ಉ: ಮುಗಿಯುವುದಿಲ್ಲ ಬದುಕು
In reply to ಉ: ಮುಗಿಯುವುದಿಲ್ಲ ಬದುಕು by sunilkgb
ಉ: ಮುಗಿಯುವುದಿಲ್ಲ ಬದುಕು
ಉ: ಮುಗಿಯುವುದಿಲ್ಲ ಬದುಕು
In reply to ಉ: ಮುಗಿಯುವುದಿಲ್ಲ ಬದುಕು by manju787
ಉ: ಮುಗಿಯುವುದಿಲ್ಲ ಬದುಕು
ಉ: ಮುಗಿಯುವುದಿಲ್ಲ ಬದುಕು
ಉ: ಮುಗಿಯುವುದಿಲ್ಲ ಬದುಕು
In reply to ಉ: ಮುಗಿಯುವುದಿಲ್ಲ ಬದುಕು by ravi kumbar
ಉ: ಮುಗಿಯುವುದಿಲ್ಲ ಬದುಕು