ಮುಗುದೆ ಬಾಳಲಿ

ಮುಗುದೆ ಬಾಳಲಿ

ಕವನ

ಮುಗುದೆ ಬಾಳಲಿ

ಬೆಳಕು ಕಾಣದೆ

ಬದುಕು ವ್ಯಸನವ ಕಂಡಿದೆ 

ಶಿಸ್ತು ಕಲಿಸುವ 

ತಂದೆ ತಾಯಿಯ

ಮಾತ ಮೀರುತ ಬೆಳೆದಿದೆ 

 

ಹೆಜ್ಜೆ ತಪ್ಪಿದೆ

ಕೂಸ ಪಥದಲಿ

ಭಾವ ಕುಸುಮವು ಇಲ್ಲದೆ

ನೀತಿ ನಿಯಮದ

ಭೀತಿ ಇಲ್ಲದೆ

ಹುಸಿಯ ಪ್ರೇಮಕೆ ಸೋತಿದೆ 

 

ಕುರುಡು ಪ್ರೀತಿಯು 

ಕೈಯ ಕೊಡಲದು

ಮತ್ತೆ ಹೃದಯವು ಚೀರಿದೆ 

ಬಾಡಿ ಹೋಗಿಹ

ಚೆಲುವ ತನುವದು

ತಲೆಯನೆತ್ತದೆ ಕೂತಿದೆ 

 

ಕಾಲ ಸಾಗುತ

ಎಲ್ಲ ಹೇಳಿದೆ

ತಪ್ಪು ನಿನ್ನಲೆ ಅವಿತಿದೆ

ಮುಂದೆ ಅರಳುವ

ಪ್ರೇಮ ಗೆಲ್ಲುತ

ಬಾಳ್ವೆ ನಡೆಸೂ ಎಂದಿದೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್