ಮುಗುಳ್ನಗೆಯ-ಮುನ್ನುಡಿ

ಮುಗುಳ್ನಗೆಯ-ಮುನ್ನುಡಿ

ಬರಹ

ಮತ್ತು ಇಲ್ಲಿ ಬರುವುದು ಮಹಾ ಅಚ್ಚರಿಯ ನಿಗೂಡ: ಈ ಪುಸ್ತಕದಲ್ಲಿ ಓದಬಹುದು ಕೂಡ!
ಕಪ್ಪು ಬಣ್ಣದಲ್ಲಿರುವುದೆಲ್ಲ ಆಕ್ಷರಗಳು.
ಯುಕ್ತವಾಗಿ ಓದಬಹುದು ಎಡದಿಂದ ಬಲಕ್ಕೆ ಸಾಲುಸಾಲಾಗಿ.
ಏಕೆಂದರೆ, ಬಲದಿಂದ ಎಡಕ್ಕೆ ಓದಿದರೆ: (ಕನ್ನಡವೆನೆ ಮನ ಕುಣಿಯುವುದು!):
"!ಉದುವುಯಿಣುಕ್ ಅನಮ್ ಎನೆವಡನ್ನಕ್" (ಳತಿನ್ ಅಕ್ಷರಗಳು) ಅಗುವುದು ಕಮಂಗಿ ಭಾಷೆಯಾಗಿ!
ಕನ್ನಡ ವರ್ಣಮಾಲೆಯಲ್ಲಿ: "ದುವುಯುಣಿಕು ನಮ ನೆವೆಡನ್ನಕ" ಅನಿಸುವುದೇನು ಚೆನ್ನಾಗಿ?
ನಮ್ಮಲ್ಲಿ ಮತ್ತು ಯೂರೋಪಿನ ಎಲ್ಲಾ ಭಾಷೆಗಳಲ್ಲಿ ಎಡದಿಂದ ಬಲಕ್ಕೆ ಬರೆಯುವುದು ಓದುವುದು ವಾಡಿಕೆಯಾಗಿಬಿಟ್ಟಿದೆ.
ಹಾಗೆಯೇ ಮುಂದುವರಿಸಿಬಿಡೋಣ.
ಆದಷ್ಟೂ ದೊಡ್ಡ ಓದುಗರ ವೃತ್ತ ತಲುಪಲು ಅಥವ ಮುಟ್ಟಲು ಗ್ರಂಥಕರ್ತ ಲೇಖಕ ವಿಶೇಷ ಗಮನವನ್ನು ಡಿಯಬೆಟಿಸ್ ರೋಗಿಗಳಿಗೆ ಕೊಟ್ಟಿದ್ದಾನೆ. ಆದ್ದರಿಂದ ನಿರರ್ಥಕವಾಗಿ ಹುಡುಕುವಿರಿ ಒಂದು ನುಡಿ: ಸಕ್ಕರೆ.
ಆಲ್ಲದೆ ಇತರ ಜನ ಡಿಏಟ್ ಪತ್ಯ ಮಾಡುವ ಮತ್ತು ಕೊಬ್ಬು ಪುಷ್ಟಿಗಳಿಂದಮೈದುಂಬಿ ಹೆಚ್ಚುತೂಕವಿರುವವರನ್ನು
ಕುಚೇದ ಮಡುವುದು ಬಿಡಲು ದಪ್ಪಕ್ಷರಗಳ ಆಚ್ಚು ಮಾಡಿಲ್ಲ.
ಅಂತ್ಯಕ್ಕೆ ಮೊದಲು ಮತ್ತೊಂದು ಕೋರಿಕೆಯ ಮಾತು.
ಈ ಪುಸ್ತಕ ಶೀಗ್ರವಾಗಿ ಓದಬೇಡಿ.
ಕೆಲವೊಂದು ಅನಿರ್ಧಿಷ್ಟ ಅಥವ ಕಠಿಣ ಅಥವ ದ್ವಂದ್ವ ಮಾತಿನ ಸೂಕ್ಷ್ಮಾರ್ಥ ಅನರ್ಥವಾಗಿ ಕಳಚಿಕೊಂಡು ಹೋಗಬಹುದು.
ಅದಲ್ಲದ ಆಗ ಆದಷ್ಟು ಶೀಗ್ರವಾಗಿ ಮತ್ತೊಮ್ಮೆ ಪುಸ್ತಕವನ್ನು ಕೊಂಡುಕೊಳ್ಳಬೇಕಾಗುವುದು.
ಆದು ಯಾತಕ್ಕೆ ಮಾಡಬೇಕು - ಈಗಾಗಲೆ ಒಂದು ಪಡೆದಿರುವಾಗ.
ಒಂದು ವೇಳೆ ಈ ಪುಸ್ತಕ ನಿಮ್ಮ ನೀರೀಕ್ಷಣೆಯನ್ನು ತುಂಬಿ ಸಮಾದಾನ ಪಡಿಸಿದ್ದರೆ, ಆಗ ಬರೆಯಿರಿ ನನಗೆ.
ಇಲ್ಲವೆಂದರೆ, ಯಾರಿಗೂ ಬರೆಯಬೇಡಿ.
ಇತರರವರೇ ತಮತಮಗೆ ನಿರಾಶೆಬೀಳಲು ಬಿಟ್ಟುಬಿಡಿ.

ಜೆರ್ಮನ್ ಹಾಸ್ಯ ಕವಿ ತನ್ನ ಹಾಯಲೇಕನಗಳ ಸಂಗ್ರಹಕ್ಕೆ ಬರೆದಿದ್ದ ಮುಗುಳ್ನಗೆಯ-ಮುನ್ನುಡಿ