ಮುಟ್ಟುಗೋಲು !!

ಮುಟ್ಟುಗೋಲು !!

ಕವನ

ಬಾಳಿನ ಸರ್ವ ಸ್ತರದಿ ಸ್ಥಿರವಾಗಿದೆ
ಈ ಮುಟ್ಟುಗೋಲು !!
ಎಲ್ಲ ತೊಡರುಗಳ ದಾಟಿ ಸ್ಥಿತಪ್ರಜ್ಞನಾಗಿ
ಮುಟ್ಟಬೇಕಾಗಿದೆ ನಮ್ಮ ನಮ್ಮ ಗೋಲು ( Goal).

ಪಂಚೆಯ ಮೇಲೆ ಪ್ಯಾಂಟಿನ ಮುಟ್ಟುಗೋಲು
ಹಾಗೆಯೇ ಸೀರೆಯ ಮೇಲೆ ಮೀಡಿಯದ್ದು
ಹೀಗೆ ಬೇರೆಯವರ ಅರೆ ಸಂಸ್ಕೃತಿಯಿಂದ
ನಮ್ಮ ಸಿರಿಸಂಸ್ಕೃತಿಯ ಮುಟ್ಟುಗೋಲು.

ಈಗಿನ "ಫಾಸ್ಟ್-ಪುಡ್"ಗಳ ಎದುರು 
ನಮ್ಮ
ದೇಶಿಯ "ಫೀಸ್ಟ್"ನ ಸೋಲು
ಇಲ್ಲಿ ಏನೇ ಏರು-ಪೇರಾದರೂ
"ಅಡ್ಜಸ್ಟ್" ಮಾಡಿಕೊಳ್ಬೇಕ್ರಿ  ಎನ್ನುವುದೊಂದು
ಅಲಿಖಿತ ರೂಲು !

ಶಾಂತಿಯ ಮೇಲೆ ಅಶಾಂತಿಯ ಮುಟ್ಟುಗೋಲು
ನೆಮ್ಮದಿ ಮೇಲೆ ನಾಣ್ಯದ್ದು,
ಹೀಗೆಯೇ ಅಂತರಂಗದ ಸತ್ಯದ ಮೇಲೆ
ಬಹಿರಂಗದ ಮಿಥ್ಯಗಳದ್ದೆ ಕಾರುಬಾರು !!

Comments