ಮುತ್ತಿನ ಫಸಲು

ಮುತ್ತಿನ ಫಸಲು

ಕವನ

ಸುರಿದಿಹ ಇಬ್ಬನಿ ಕರಗುತ ಕುಳಿತಿದೆ

ಮಿರ ಮಿರ ಮಿಂಚಿ ಮುತ್ತಂತೆ

ಬೆರಗಿನ ಮನದಲಿ ಕರದಲಿ ಲೇಖನಿ

ಬರೆದನು ಮನದಿ ಬಂದಂತೆ

 

ಮುತ್ತಿನ ಫಸಲನು ಹೊತ್ತಿಹ ಪೈರಿದು

ಸುತ್ತಲು ಮೊಳೆತು ಹೊಲದಲ್ಲಿ

ಮತ್ತದ ಕಾಣುತ ಚಿತ್ತದಿ ಬಂದುದು

ತುತ್ತಿನ ಬೆಳೆಗೆ ನೆಲೆಯೆಲ್ಲಿ

 

ಎಣಿಸಲು ಹಂಬಲ ಹಣವನು ಬಯಸುವ

ಗುಣವದು ತುಂಬಿ ಮನದಲ್ಲಿ

ಝಣ ಝಣ ಸದ್ದದು ಮನವನು ಗೆದ್ದಿದೆ

ಕಣ ಕಣ ಬೆರೆತು ರಕ್ತದಲಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್