ಮುದ್ದಿನ ಬೆಕ್ಕು

ಮುದ್ದಿನ ಬೆಕ್ಕು

ಇವನು ಈಗ್ಗೆ ಎರಡು ವರ್ಷಗಳ ಕೆಳಗೆ ನನ್ನನ್ನು ಬಿಟ್ಟು ಸ್ವರ್ಗಕ್ಕೆ ತೆರಳಿದ ನನ್ನ ಮುದ್ದು ಕಂದ. ಪುಟ್ಟ ಮರಿಯನ್ನು ತಂದು ಸಾಕಿದ್ದೆ. ಅವನು ಮನೆಗೆ ಬಂದ ನಂತರವೆ ಮನೆಯ ಎಲ್ಲಾ ಬೆಕ್ಕುಗಳಿಗು ಮೆಡಿಕಲ್ ನಿಂದ ತಂದ ಫುಡ್ ಹಾಕುವ ರೂಢಿ ಆಯ್ತು. ಅವನು ಯಾವಾಗಲು ಒಂಟಿ ಒತ್ತಟ್ಟು.

ಯಾರೂ ಅವನನ್ನು ಮುಟ್ಟುವಂತಿಲ್ಲ. ಆದರೆ ನಾನು ಮಾತ್ರ ಎಲ್ಲಿಂದ ಬಂದರೂ ಅವನು ದಾರಿಯಲ್ಲಿ ಇದ್ದರೆ ನನ್ನನ್ನು ನೋಡಿದೊಡನೆ ಅಲ್ಲೇ ಬಿದ್ದುಬಿಡುತ್ತಾನೆ. ಮತ್ತೆ ಅವನನ್ನು ನಾನು ಮಗುವಿನಂತೆ ಎತ್ತಿಕೊಂಡು ಬರಬೇಕು. ಆಗಲೇ ಅವನಿಗೆ ಸಮಾಧಾನ. 

ಕಳೆದ ಕೊರೊನ ಲಾಕ್ಡೌನ್ ಸಮಯದಲ್ಲಿ ನಾನು ಮನೆಯಲ್ಲಿ ಕೊಂಚ ಬಿಜಿ ಇದ್ದೆ. ಅವನ ಬಾಲದಲ್ಲಿ ಸಣ್ಣ ಗಾಯ ಆಗಿತ್ತು. ನನಗದು ಗೊತ್ತಾಗಲಿಲ್ಲ. ಆ ಗಾಯ ಜೋರಾಗಿತ್ತು. ಅದರ ಮರುದಿನ ಬೆಕ್ಕೇ ಇಲ್ಲ.. ಹುಡುಕಿ ಹುಡುಕಿ ಕೊನೆಗೆ ಒಂದು ಮಾಟೆಯಲ್ಲಿ ಸಿಕ್ಕಿದ. ಬಾಲದ ಬುಡವೆಲ್ಲಾ ಜೋರಾಗಿತ್ತು. ಹುಳ ಆಗಿತ್ತು. ಮನೆಗೆ ತಂದು ಒಳಗೆ ಮಲಗಿಸಿದೆ. ಅದರ ಮರುದಿನ ನನ್ನ ಕೈಯ್ಯಲ್ಲೇ ಒದ್ದಾಡಿ ಒದ್ದಾಡಿ ಜೀವ ಬಿಟ್ಟ. ನನಗೆ ಅವನೊಬ್ಬನೆ ತುಂಬಾ ಪ್ರೀತಿಯ ಬೆಕ್ಕು. ಆದರೆ ಏನು ಮಾಡಲಿ? ಅವ ಹೋಗಿಬಿಟ್ಟ