ಮುದ್ದು ಕಂದ
ಕವನ
ಮುದ್ದು ಕಂದ ಮುದ್ದು ಕಂದ
ನಿನ್ನ ಅಂದ ನೋಡಲೆಂತು ಚಂದ/
ಅಮ್ಮನ ಕಣ್ಣು ತಪ್ಪಿಸಿ ಬಂದ
ಆಡಲೆಂದು ತುಂಬಿದ ಮನದಿಂದ//
ತೆವಲಿ ತೆವಲಿ ಬಂದು ನಿಂದ
ಅಪ್ಪ ನಿಗೆ ಸಿಕ್ಕಿದ ನರಿ ಮರಿ ಯೊಂದ/
ಸಾಕಿದರು ಪ್ರೀತಿಯಲಿ ಬಹುದಿನದಿಂದ
ಸ್ನೇಹವು ಬೆಳೆಯಿತು ದಿನ ದಿನದಿಂದ//
ಒಟ್ಟಿಗೆ ಆಡುತ ಕುಳಿತಿಹ ಸೊಬಗದು
ಮೇಲಕೆ ನೋಡಲು ಕಂಡಿತು ಕಿವಿಯದು/
ಕೋಟಲಿರುವುದೆಂದು ತಿಳಿಯದಿರುವುದು
ಪ್ರಾಣಿಯೆಂದು ಹೆದರಿ ಕುಳಿತಿಹುದು//
ಆಡುವುದ ನಿಲ್ಲಿಸಿ ಓಡುವ ತರದಲಿಹುದು
ಅಮ್ಮನು ಹಾಕಿದ ಉಡುಪದು/
ಕಂದನಿಗೆಂದು ತಿಳಿಯಲು ಬಲ್ಲದು
ಸಂತಸದದಿಂದ ಆಡುವುದೊಂದೇ ನೆನಪದು//
-ಸುಭಾಷಿಣಿ ಚಂದ್ರ , ಕಾಸರಗೋಡು
ಇಂಟರ್ನೆಟ್ ಚಿತ್ರ ಕೃಪೆ
ಚಿತ್ರ್
