ಮುದ್ದು ತಮ್ಮ
ಕವನ
ಮುದ್ದು ತಮ್ಮ-ಇರುವನು ಡುಮ್ಮ
ತಿಂಡಿ ಪೋತ - ಮುಕ್ಕುವನೀತ..
ದೋಸೆಯೆಂದರೆ ಬಹಳವೆ ಆಸೆ
ಬಕಬಕ ತಿನ್ನುವ ಅಮ್ಮನ ಕೂಸೆ :
ಓದು- ಬರಹ ಇವನಿಗೆ ಬಲು ಇಷ್ಟ
ಆದರೆ ಓಡಲು ಇವನಿಗೆ ಅಷ್ಟೇ ಕಷ್ಟ
ಎಲ್ಲರ ಪ್ರೀತಿಯ ನನ್ನಯ ತಮ್ಮ....
ಮುದ್ದಿನ ಅರಗಿಣಿ- ನನಗವನೇ ತಿಮ್ಮ.
ಮಗ್ಗಿ, ಪಾಠ ಎಲ್ಲದರಲ್ಲೂ ಪಕ್ಕ
ಪಟಪಟನೇ ಮಾಡುವವನು ಲೆಕ್ಕ
ಗೆಳೆಯರ ಬಳಗದ ನೆಚ್ಚಿನ ಮಿತ್ರ
ಗುರುಗಳ ಪ್ರೀತಿಗೆ ಬಹಳವೆ ಪಾತ್ರ.
ದೋಸೆಯ ಆಸೆಯ ತಮ್ಮನು ಇವನು
ದೋಸೆಯ ತಿನ್ನುತ ಎಣಿಸುವನಿವನು
ಒಂದು, ಎರಡು....ಎಂಟು, ಹತ್ತೆನ್ನುವನು.!
ಹೊಟ್ಟೆ ತುಂಬಿ ಢರ್ ಎಂದು ತೇಗುವನು.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್