ಮುದ್ದು ನಲ್ಲೆ
ಕವನ
ಓ ನಲ್ಲೆ ನನ್ನ ಮುದ್ದು ನಲ್ಲೆ.
ನನ್ನ ಮನದಲ್ಲೆ ಇರುವೆಯಲ್ಲೆ.
ನಾನು ಏನಂತ ಹೇಗೇಳಲಿ
ಸುಖ ಸುಖ
ನನ್ನ ಪ್ರೇಮ ಸಾಗರದಲ್ಲಿ
ಮೂಡಿದೆ ನೀನು ಒಲವ ತಾರೆಯಾಗಿ
ಬಾಳ ಜೊತೆಯಾಗಿ...
ನಾನು ಏನಂತ ಹೇಗೇಳಲಿ
ಖುಷಿ ಖುಷಿ
ನನ್ನ ಪ್ರೀತಿ ಕಡಲಲ್ಲಿ
ಅರಳಿದೆ ನೀನು ಚೆಲುವ ಹೂವಾಗಿ
ಬಾಳ ಬೆಳಕಾಗಿ...
ಓ ನಲ್ಲೆ ನನ್ನ ಮುದ್ದು ನಲ್ಲೆ.
ನನ್ನ ಮನದಲ್ಲೆ ಇರುವೆಯಲ್ಲೆ.
ನಾ ಏನಂತ ಹೇಗೇಳಲಿ
ನಗು ನಗು
ನನ್ನ ಎದೆಯ ಭಾವದಲಿ
ಇರುವೆ ನೀ ನಗುವಾಗಿ
ನನ್ನ ಮಗುವಾಗಿ
ನಾ ಏನಂತ ಹೇಗೇಳಲಿ
ನಗು ನಗು
ನನ್ನ ಹೃದಯ ಜೀವದಲಿ
ಇರುವೆ ನೀ ಮಗುವಾಗಿ
ನನ್ನ ನಗುವಾಗಿ
ಓ ನಲ್ಲೆ ನನ್ನ ಮುದ್ದು ನಲ್ಲೆ
ನನ್ನ ಮನದಲ್ಲೆ ಇರುವೆಯಲ್ಲೆ
ನಾ ಏನಂತ ಹೇಗೇಳಲಿ
ದಿನದಿನ ಅನುದಿನ
ಬರಲಿ ನಮಗೆ ಹೀಗೆ ಸುದಿನ
ಅನುದಿನ ತರಲಿ ಪ್ರೀತಿ ಪ್ರತಿಕ್ಷಣ
ನಾ ಏನಂತ ಹೇಗೇಳಲಿ
ಕ್ಷಣಕ್ಷಣ ಅನುಕ್ಸಣ
ಬರಲಿ ನಮಗೆ ಹೀಗೆ ಈದಿನ
ಅನುದಿನ ತರಲಿ ಪ್ರೀತಿ ಪ್ರತಿಕ್ಷಣ
ಓ ನಲ್ಲೆ ನನ್ನ ಮುದ್ದು ನಲ್ಲೆ
ನಿನ್ನ ಮನದಲ್ಲೆ ಇರುವೆಯಲ್ಲೆ
-ಬಂದ್ರಳ್ಳಿ ಚಂದ್ರು, ತುಮಕೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್