ಮುದ್ರಿಸಿದ್ದು ಅಳಿಸಿಹೋಗುವ ಕಾಗದ

ಮುದ್ರಿಸಿದ್ದು ಅಳಿಸಿಹೋಗುವ ಕಾಗದ

ಬರಹ


ಕ್ಸೆರಾಕ್ಸ್ ಕಂಪೆನಿ ಫೊಟೋಸ್ಟಾಟ್ ಯಂತ್ರಗಳನ್ನು ತಯಾರಿಸುವಲ್ಲಿ ಹೆಸರು ಮಾಡಿದೆ.ಈಗದು ಫೊಟೋಸ್ಟಾಟ್ ಯಂತ್ರದಲ್ಲಿ ಬಳಸುವ ಕಾಗದವನ್ನೂ ತಯಾರು ಮಾಡಿದೆ. ಆ ಕಾಗದದ ವಿಶೇಷತೆಯೆಂದರೆ, ಅದು ತಾತ್ಕಾಲಿಕ ಕಾಗದಪತ್ರಗಳನ್ನು ಮುದ್ರಿಸಲು ತಯಾರಿಸಲಾಗಿದೆ. ಇದರಲ್ಲಿ ಮುದ್ರಿಸಿದ್ದು ಕೆಲವು ತಾಸುಗಳ ನಂತರ ನೋಡಿದರೆ ಅಳಿಸಿ ಹೋಗಿರುತ್ತದೆ.ಇದಕ್ಕೆ ಬೇಕಾದ ಸಮಯ ಹದಿನಾರು xeroxಗಂಟೆಯಾಗಿರಬಹುದು. ಈ ಸಮಯದ ಅವಧಿಯನ್ನು ಹೆಚ್ಚು ಕಡಿಮೆ ಮಾಡಬಹುದು! ಕಾಗದವನ್ನು ಮತ್ತೆ ಮುದ್ರಣಕ್ಕೆ ಬಳಸಲು ಅಡ್ಡಿಯಿಲ್ಲ.ಈ ಕಾಗದದ ಮರುಬಳಕೆಯಿಂದ ಪರಿಸರಕ್ಕೆ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಷ್ಟೇ? ಅರ್ಧಕ್ಕರ್ಧ ಕಚೇರಿ ಕಾಗದ ಪತ್ರಗಳು ಒಮ್ಮೆ ನೋಡಲು ಮಾತ್ರಾ ಬೇಕಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.ಅಂದ ಹಾಗೆ ಏಟಿಎಂ ಯಂತ್ರದಿಂದ ಮುದ್ರಿಸಿ ತೆಗೆದ ಬ್ಯಾಂಕ್ ಖಾತೆ ಅಥವ ವ್ಯವಹಾರ ವಿವರಗಳು ಒಂದೆರಡು ತಿಂಗಳ ನಂತರ ಮಾಯವಾಗಿರುವುದನ್ನು ಗಮನಿಸಿದ್ದೀರ್‍ಆ?
--------------------------------------------
ಮೊಬೈಲ್ ಫೋನ್ ಬ್ಯಾಟರಿ: ಬಳಕೆಯಲ್ಲಿ ಜಿಪುಣತನ
ಮೊಬೈಲ್ ಫೋನ್‌ಗಳಲ್ಲಿ ಈಗ ಸಾಮಾನ್ಯವಾಗಿ ಲಿಥಿಯಮ್ ಅಯಾನು ಬ್ಯಾಟರಿಗಳ ಬಳಕೆಯಾಗುತ್ತವೆ. ಸದ್ಯ ಬ್ಯಾಟರಿಗಳನ್ನು ತಯಾರಿಸಲು ಪರ್ಯಾಯ ಧಾತುಗಳ್ಯಾವುವೂ ಸಿಕ್ಕಿಲ್ಲ. ಹಾಗೆಂದು ಮೊಬೈಲ್ ಫೋನ್‌ಗಳು ಸ್ಮಾರ್ಟ್ ಫೋನ್‌ಗಳಾಗುತ್ತಿವೆ. ಅವುಗಳಲ್ಲಿ ಅಂತರ್ಜಾಲ ಬಳಕೆಗೆ ಅವಕಾಶ ಸಿಕ್ಕಿದೆ. ಕ್ಯಾಮರಾ, ರೇಡಿಯೋ, ಸಂಗೀತ ನುಡಿಸುವ ಆಯ್ಕೆ ಇತ್ಯಾದಿಗಳು ಮೊಬೈಲಿನಲ್ಲಿ ಸಿಗುತ್ತಿವೆ. ಹಾಗಾದರೆ ಅದೇ ಹಳೆಯ ತಂತ್ರಜ್ಞಾನದ ಬ್ಯಾಟರಿಗಳಿಂದ ಅಧಿಕ ದಕ್ಷತೆ ನಿರೀಕ್ಷಿಸುವುದು ಹೇಗೆ? ಒಂದೇ ಪರಿಹಾರ ಎಂದರೆ ಮೊಬೈಲ್ ಫೋನಿನ ತೆರೆಯು ಬಳಸುವ ಶಕ್ತಿಯಲ್ಲಿ ಕಡಿತ ಮಾಡುವುದು. ಬಳಸದಾಗ ಮೊಬೈಲ್ ಸಾಧನದಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಚಾಲೂ ಸ್ಥಿತಿಯಲ್ಲಿರದಂತೆ ಮಾಡುವುದು.ರೇಡಿಯೊ,ಕ್ಯಾಮರಾ ,ಪ್ಲೇಯರ್ ಇವುಗಳೆಲ್ಲಾ ಬೇಕಾದಾಗ ಮಾತ್ರಾ ಚಾಲೂ ಆಗಿ,ಉಳಿದ ಹೊತ್ತಿನಲ್ಲಿ ತಮ್ಮಷ್ಟಕ್ಕೇ ಬಂದಾಗಿ ಬಿಡುವಂತೆ ಈಗಿನ ಸಾಧನಗಳಲ್ಲಿ ಅಳವಡಿಸಲಾಗಿರುತ್ತದೆ.ಮಿರಾಸೋಲ್ ಎನ್ನುವ ಹೊಸ ತಂತ್ರಜ್ಞಾನದ ತೆರೆಗಳು ಬಳಸುವ ಶಕ್ತಿ ಬಹಳ ಕಡಿಮೆ. ಅಲ್ಲದೆ ಬ್ಲೂಟೂತ್ ತಂತ್ರಜ್ಞಾನವೂ ಕಡಿಮೆ ಶಕ್ತಿ ಬಳಸಿ,ನಿಸ್ತಂತು ಸಂವಹನವನ್ನು ಮೊಬೈಲ್ ಸಾಧನಕ್ಕೆ ಒದಗಿಸುತ್ತದೆ.
-------------------------------------------------
ಗೂಗಲ್ ಗೇರ್ಸ್
ಗೂಗಲ್ ಪದಸಂಸ್ಕರಣ, ಸ್ಪ್ರೆಡ್‌ಶೀಟ್ ಮುಂತಾದ ತಂತ್ರಾಂಶಗಳನ್ನು ಅಂತರ್ಜಾಲ ಮೂಲಕ ಉಚಿತವಾಗಿಯೇ ಒದಗಿಸಿ, ಮೈಕ್ರೋಸಾಫ್ಟ್ ಕಂಪೆನಿಯ ಆಫೀಸ್ ತಂತ್ರಾಂಶಕ್ಕೆ ಸ್ಪರ್ಧೆ ನೀಡಲು ಪ್ರಯತ್ನಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಆದರೆ ಅಂತರ್ಜಾಲ ಮೂಲಕ ತಂತ್ರಾಂಶ ಸೇವೆ ಒದಗಿಸುವಾಗಿನ ಸಮಸ್ಯೆಯೆಂದರೆ,ಅಂತರ್ಜಾಲಕ್ಕೆ ಸಂಪರ್ಕ ಇಲ್ಲದ ವೇಳೆ ಪದಸಂಸ್ಕರಣ ಇತ್ಯಾದಿ ಕೆಲಸಗಳನ್ನು ಮಾಡಲಸಾಧ್ಯ. ಇದಕ್ಕೂ ಗೂಗಲ್ ಪರಿಹಾರ ಒದಗಿಸಿದೆ. ಗೂಗಲ್ ಕ್ರೋಮ್ ಬ್ರೌಸರ್ ಗೂಗಲ್‌ನ ಹೊಸ ಬ್ರೌಸರ್ ತಂತ್ರಾಂಶ. ಇದರಲ್ಲಿ ಗೂಗಲಿನ ಅಂತರ್ಜಾಲ ಆಧಾರಿತ ತಂತ್ರಾಂಶ ಸೇವೆಯ ತಂತ್ರಾಂಶ ಲೋಡ್ ಆಗಿಯೇ ಬಂದಿರುತ್ತದೆ. ಹಾಗಾಗಿ ಅಂತರ್ಜಾಲ ಸಂಪರ್ಕ ಇಲ್ಲದಾಗಲೂ ತಂತ್ರಾಂಶ ಬ್ರೌಸರಿನಲ್ಲಿ ನಿಮ್ಮ ಉಪಯೋಗಕ್ಕೆ ಸಿಗುತ್ತದೆ. ಮಾತ್ರವಲ್ಲ ಇಂತಹ ಸೇವೆ ಒದಗಿಸುವಾಗ, ಸಾಮಾನ್ಯವಾಗಿ ಬಳಕೆದಾರ ಸೃಷ್ಟಿಸಿದ ಕಡತಗಳನ್ನು ಅಂತರ್ಜಾಲದ ಸರ್ವರ್‌ಗಳಲ್ಲಿಡುವುದು ಸಾಮಾನ್ಯ. ಗೂಗಲ್ ಇದರ ಬದಲು ಬಳಕೆದಾರನ ಕಂಪ್ಯೂಟರಿನಲ್ಲಿಯೇ ಕಡತಗಳನ್ನು ಕಾಪಿಡಲು ವ್ಯವಸ್ಥೆ ಮಾಡಿ, ಕಡತಗಳು ಬಳಕೆದರನಿಗೆ ಸದಾ ಲಭ್ಯವಾಗುವಂತೆ ಮಾಡಿವೆ.ಈ ವ್ಯವಸ್ಥೆಯನ್ನೇ ಗೂಗಲ್ ಗೇರ್ಸ್ ಎಂಬ ಹೆಸರಿನಿಂದ ಕರೆಯುತ್ತಾರೆ.
-----------------------------------------------------------
ನೋಕಿಯದಿಂದ ಐಫೋನ್‌ನಂತಹ ಫೋನ್nokia
ನೊಕಿಯಾ ಕಂಪೆನಿಯು ನೊಕಿಯ5800 ಮೊಬೈಲ್ ಸ್ಮಾರ್ಟ್ ಪೋನನ್ನು ಬಿಡುಗಡೆ ಮಾಡಿದ್ದು. ಇದು ಐಪೋನಿಗಿಂತ  ಹಲವು ರೀತಿಯಲ್ಲಿ ಹೆಚ್ಚು ಅನುಕೂಲತೆಗಳನ್ನು ಹೊಂದಿದೆ.ನೋಕಿಯ ಪೋನಿನಲ್ಲಿ ಕ್ಯಾಮರಾದ ಜತೆ ವಿಡಿಯೋ ಚಿತ್ರವನ್ನೂ ತೆಗೆಯಲು ಅವಕಾಶವಿದ್ದು,ವಿಡಿಯೋ ಕಾನ್ಫರೆನ್ಸ್ ನಡೆಸಲು ಅವಕಾಶ ನೀಡುತ್ತದೆ.ಐಫೋನಿನಲ್ಲಿದು ಸಾಧ್ಯವಿಲ್ಲ. ಬ್ಯಾಟರಿಯನ್ನು ಬದಲಿಸುವ ಸೌಕರ್ಯ ಐಫೋನಿನಲ್ಲಿಲ್ಲ, ಅದರೆ ನೋಕಿಯ ಇದಕ್ಕೆ ಅವಕಾಶ ಕಲ್ಪಿಸಿದೆ.ಇನ್ನು ಇದರಲ್ಲಿ ಕೈಬರಹದ ಮೂಲಕ ಸಂದೇಶ ಬರೆಯಬಹುದು,ಇಲ್ಲವೇ ಸ್ಟೈಲಸ್ ಕಡ್ಡಿಯಿಂದ ಟೈಪಿಸಬಹುದಾದ ಸ್ಪರ್ಶ ಸಂವೇದಿ ಕೀಲಿ ಮಣೆಯು ನೋಕಿಯದ ಹ್ಯಾಂಡ್‌ಸೆಟ್‍ನಲ್ಲಿದೆ.ಸಾಮಾನ್ಯ ತೆರನ ಕೀಲಿ ಮಣೆಯೂ ಇದರಲ್ಲಿದೆ.ಆದರೆ ಇಂತಹ ಸೌಕರ್ಯ ಐಫೋನಿನಲ್ಲಿಲ್ಲ.ಸಮೂಹಕ್ಕೆ ಸಂದೇಶವನ್ನು ರವಾನಿಸುವ ಸೌಲಭ್ಯವನ್ನು ಐಫೋನಿನಲ್ಲಿ ನೀಡಲಾಗಿಲ್ಲ, ಆದರೆ ನೋಕಿಯ ಇಂತಹ ಅವಕಾಶವನ್ನು ಗ್ರಾಹಕರಿಗೆ ಒದಗಿಸಿದೆ.ನೋಕಿಯ ಪೋನಿನಲ್ಲಿ ಖರೀದಿಸಿದ ವರ್ಷ ಹಾಡುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.ಐಪೋನ್ ಗ್ರಾಹಕರು ಈ ಸೌಲಭ್ಯವಂಚಿತರು.ನೋಕಿಯದಲ್ಲಿ ಲಭ್ಯವಿರುವ ಸ್ಮರಣಕೋಶ ಸಾಮರ್ಥ್ಯವನ್ನು ಬಾಹ್ಯ ಸಾಧನವನ್ನು ಸೇರಿಸಿಕೊಂಡು ಹೆಚ್ಚಿಸಲು ಅವಕಾಶವಿದೆ.
--------------------------------------------------
ವಿದ್ಯುಚ್ಛಕ್ತಿ ದರ: ಒಂದೊಂದು ಹೊತ್ತು ಒಂದೊಂದುsolar
ಗೂಗಲ್ ಕಂಪೆನಿಯು ಶಕ್ತಿಯ ಉತ್ಪಾದನೆ ಮತ್ತು ಬಳಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿ ಇನ್ನು ಇಪ್ಪತ್ತು ವರ್ಷಗಳಲ್ಲಿ ಸುಮಾರು ಐದು ಟ್ರಿಲಿಯನ್ ಡಾಲರುಗಳ ಹೂಡಿಕೆಯನ್ನು ಯೋಜಿಸಿದೆ. ಗಾಳಿ,ಸೂರ್ಯ ಮತ್ತು ಭೂಮಿಯೊಳಗಿನ ಶಾಖದಿಂದ ವಿದ್ಯುತ್ ಉತ್ಪಾದಿಸಲು ಹೆಚ್ಚಿನ ಆದ್ಯತೆ ನೀಡುವುದು ಕಂಪೆನಿಯ ಗುರಿಯಾಗಲಿದೆ. ಅಲ್ಲದೆ ಬೇಡಿಕೆಯನ್ನು ಆಧಾರವಾಗಿರಿಸಿಕೊಂಡು, ವಿದ್ಯುತ್‌ನ ಬೆಲೆ ನಿಗದಿ ಮಾಡುವ ಸ್ಮಾರ್ಟ್ ಮೀಟರುಗಳನ್ನು ತಯಾರಿಸಲೂ ಗೂಗಲ್ ಬಯಸಿದೆ. ಬೆಳಗ್ಗಿನ ಹೊತ್ತು ಎಲ್ಲೆಡೆ ವಿದ್ಯುತ್ತಿಗೆ ಬೇಡಿಕೆಯಿದ್ದಾಗ ಪ್ರತಿ ಯುನಿಟಿಗೆ ಹೆಚ್ಚಿನ ದರವಿದ್ದರೆ,ಮಧ್ಯಾಹ್ನ ಬೇಡಿಕೆ ಇಳಿದರೆ, ಯುನಿಟಿನ ಬೆಲೆಯೂ ಇಳಿಯಲಿದೆ.

udayavani

ಇ-ಲೋಕ 95 6/10/2008 

ashokworld

*ಅಶೋಕ್‌ಕುಮಾರ್ ಎ