ಮುನಿದಳೇಕೆ?
ಕವನ
ಮುನಿದಳೇಕೆ ಅರಿಯದಾದೆ
ನಲ್ಲೆ ಇಂದು ಈತರ
ದಟ್ಟ ಮುಗಿಲ ಪರದೆಯೊಳಗೆ
ಉಳಿದ ಹಾಗೆ ಚಂದಿರ
ಏನು ಮರೆತೆ ಮೊಗವ ತಿರುವೆ
ನೆನಪು ಮನಕೆ ಬಾರದೆ
ರಮಿಸಲೆಂತು ಕಾಂತೆ ಇವಳ
ಹಾದಿ ಈಗ ತೋಚದೇ
ಮೊನ್ನೆ ತಾನೆ ಜನ್ಮ ದಿನಕೆ
ಬೆರಳಿಗಿಟ್ಟೆ ಉಂಗುರ
ಮದುವೆ ದಿನವು ದೂರವಿಹುದೆ
ಮತ್ತೆ ಏಕೆ ನಿಷ್ಟುರ
ಮಲ್ಲೆ ಹೂವ ಮಾಲೆ ತರಲು
ನಡೆದೆ ನಾನು ಕ್ಷಣದಲಿ
ಹೋಗಿ ತಂದು ತುರುಬಲಿಡಲು
ಬಿರಿದ ಕಮಲ ಮೊಗದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್