ಮುನಿಸೇಕೆ…?
ಕವನ
ಮುಡಿತುಂಬ ಮಲ್ಲಿಗೆಯ
ಮುಡಿದಿರುವೆ ನೀ ಚೆಲುವೆ
ಕುಡಿನೋಟ ನೀನೇಕೆ ಮರೆಸಿ ನಿಂತೆ
ಬಡಿಗೆಯಲಿ ಒಂದೆರಡು
ಬಡಿದು ಬಿಡು ಮನ ತಣಿಯೆ
ಕಡೆಗಣಿಸಿ ತೆರಳದಿರು ನನ್ನ ಕಾಂತೆ
ಬಂಗಾರದೊಡವೆಯಲಿ
ಶೃಂಗಾರಗೊಂಡಿರುವೆ
ಸಂಗಾತಿ ನೀನೀಗ ಬಳಿಗೆ ಬಾರೆ
ಸಿಂಗಾರಿ ನಿನ್ನಿಂದ
ದಂಗಾಗಿ ಹೋಗಿರುವೆ
ತಂಗಾಳಿಯಂದದಲಿ ಹಿತವ ತಾರೆ
ಕನಸೆಲ್ಲ ಕೈಗೂಡಿ
ನನಸಾಗಿ ಬಂದಿರಲು
ಮುನಿಸೇಕೆ ನನ್ನಲ್ಲಿ ಹೇಳು ಚೆಲುವೆ
ಮನದೊಳಗೆ ಕುಳಿತಿರುವೆ
ಕಣಕಣದಿ ಬೆರೆತಿರುವೆ
ಮನದನ್ನೆ ತೊರೆ ಮೌನ ಜೊತೆಗೆ ಬೆರೆವೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ಅಂತರ್ಜಾಲ)
ಚಿತ್ರ್
