ಮುನ್ನೂರು ವರ್ಷ ಹಳೆಯದಾದ ನ್ಯೂಟನ್‌ನ ಗುರುತ್ವ ತತ್ವದ ಪಠ್ಯ ಪುಸ್ತಕಗಳು

ಮುನ್ನೂರು ವರ್ಷ ಹಳೆಯದಾದ ನ್ಯೂಟನ್‌ನ ಗುರುತ್ವ ತತ್ವದ ಪಠ್ಯ ಪುಸ್ತಕಗಳು

UK ಯ 'ನ್ಯುಕೆಸಲ್ ಅಂಡರ್-ಲೈಮ್ ಸ್ಕೂಲ್, ಸ್ಟಾಫರ್ಡ್ಶೈರ್' ಶಾಲೆಯ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ, ತೀರಾ ಹಳೆಯದಾದ ಒಂದು ಬೀರುವಿನಲ್ಲಿ ಗುರುತ್ವ ತತ್ವಗಳನ್ನು ಹೊಂದಿರುವ ಒಂದು ಪುಸ್ತಕಗಳ ಪೆಟ್ಟಿಗೆ ದೊರೆತಿದೆ. ಪ್ರಖ್ಯಾತ  ವಿಜ್ಞಾನಿ ಸರ್ ಐಸಾಕ್ ನ್ಯೂಟನ್‌ನ ಗುರುತ್ವ ತತ್ವಗಳು ಹಾಗೂ ಆಲೋಚನೆಗಳ ಪುಸ್ತಕಗಳು ಇದಾಗಿವೆ.

'ನ್ಯುಕೆಸಲ್ ಅಂಡರ್-ಲೈಮ್ ಸ್ಕೂಲ್, ಸ್ಟಾಫರ್ಡ್ಶೈರ್' ಶಾಲೆಯಲ್ಲಿ ಈ ಪುಸ್ತಕಗಳು ಬೆಳಕಿಗೆ ಬಂದಿದ್ದು, ಸುಮಾರು 300 ವರ್ಷಗಳ ಹಳೆಯದಾದ ಈ ಪುಸ್ತಕಗಳ ಗುರುತ್ವ ಆವಿಷ್ಕಾರದ ಕೀರ್ತಿ ಮ್ಯುಸಿಂಗ್ಸ್ನಿಗೆ ಸಲ್ಲುತ್ತದೆ ಎಂದು ಅಂದಾಜಿಸಲಾಗಿದೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಶಾಲೆಯ ಹದಿನಾರು ವರ್ಷದ ವಿದ್ಯಾರ್ಥಿ " ಮೊದಲು ಆ ಪುಸ್ತಕದ ಪ್ರಾಮುಖ್ಯತೆ ಅಥವಾ ವಿಶೇಷತೆಯನ್ನು ನಾನು ಅರಿತಿರಲಿಲ್ಲ. ತುಂಬಾ ಹಳೆಯದಾದ ಈ ಪುಸ್ತಕಗಳು ನೋಡಲು ಆಸಕ್ತಿದಾಯಕವಾಗಿವೆ. ಹಾಗೂ ಈ ಪುಸ್ತಕಗಳು ಇನ್ನೂ ಇಲ್ಲೇ ಇರುತ್ತವೆ ಎಂದು ಭಾವಿಸುತ್ತೇನೆ ಎಂದರು.

ಈ ಪುಸ್ತಕಗಳಲ್ಲಿ ನ್ಯೂಟನ್‌ನ ಚಲನೆಯ ನಿಯಮಗಳು ಮತ್ತು ಗುರುತ್ವ ತತ್ವಗಳನ್ನು ಹೊಂದಿರುವ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಪುಟಗಳಿರಬಹುದು ಎಂದು ಅವರು ಅಂದಾಜಿಸಿದ್ದಾರೆ. ಮೂರು ಸಂಪುಟಗಳ ಈ ಸೆಟ್ 1874 ರಲ್ಲಿ ಸೇವೆ ಸಲ್ಲಿಸಿದ್ದ ಈ ಶಾಲೆಯ ಮೊದಲ ಮುಖ್ಯೋಪಾಧ್ಯಾಯ,ಹಾಗೂ ಖ್ಯಾತ ಫ್ರಾನ್ಸಿಸ್ ಎಲಿಯಟ್ ಕಿಚನರ್, ಅವರ ಆಸ್ತಿ ಎಂದು ನಂಬಲಾಗಿದೆ. ಇಂತಹ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಪುಸ್ತಕಗಳನ್ನು ಮಾರಾಟ ಮಾಡುವ ಯೋಚನೆ ಮಾಡುವುದಿಲ್ಲ. ಇದು ನಮ್ಮ ಶಾಲೆ ಹಾಗೂ ವಿಧ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಈಗಲೂ ಸಾಧ್ಯವಾದಷ್ಟು ಪುಸ್ತಕಗಳನ್ನು ಕಂಡುಹಿಡಿಯಲು ಸಂಶೋಧನೆ ಮಾಡುತ್ತಿದ್ದೇವೆ. ಎಂದು ಶಾಲೆಯ ಮಾರ್ಕೆಟಿಂಗ್ ಮತ್ತು ಅಭಿವೃದ್ಧಿ ಮ್ಯಾನೇಜರ್ ಜೂಲಿ ಹೇಸ್ಕೇತ್ ಹೇಳಿದ್ದಾರೆ.


ಮೂರು ಪುಸ್ತಕಗಳ ನೈಸರ್ಗಿಕ ತತ್ವಶಾಸ್ತ್ರದ ಗಣಿತದ ತತ್ವಗಳನ್ನು ಫಿಲಾಸೊಫೇ ನ್ಯಾಚುರಲೀಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ, ಲ್ಯಾಟಿನ್ ಹೆಸರಿಸಲಾಗಿದೆ. ಮತ್ತು ಮೊದಲ ಪುಸ್ತಕವನ್ನು ಜುಲೈ 5, 1687 ರಂದು ಪ್ರಕಟಿಸಲಾಯಿತು. ಎಂದು ದಿ ಹಿಂದೂ ಬ್ಯುಸಿನೆಸ್ ಲೈನ್ ಪತ್ರಿಕೆಯಲ್ಲಿ ವರದಿಯಾಗಿದೆ.

ಲಿಂಕ್:
http://www.thehindubusinessline.com/features/british-school-discovers-newtons-300yearold-textbooks/article4375213.ece