ಮುಪ್ಪು
ಮುಪ್ಪು ಆವರಿಸಿದೆ ಆದ್ರೆ ಸಾವಿನ ಅಂಜಿಕೆ ನಮಗಿಲ್ಲಾ ಬದುಕುವುದು ಹೇಗೆ ಎಂಬ ಭಯ ನಮಗಿಲ್ಲಾ, ಆಧುನಿಕತೆ!!!!!, ಕುಟುಂಬ ವಿಘಟನೆ !!!!! ಪಾಶ್ಚಾತ್ಯ ಜೀವನಶೈಲಿ!!! ಎಲ್ಲರ ಮನೆಯಲ್ಲಿ ಛೆ !!!! ನಮ್ಮ ಬದುಕು ಅತಂತ್ರವಾಗಿದೆ ದಿಕ್ಕಿಲ್ಲದವರಾಗಿದ್ದೆವೆ!!!! ಒಂಟಿ ಜೀವಿಗಳಾಗಿದ್ದೆವೆ!!!! ಬದುಕಿರುವಷ್ಟು ದಿನ ನೂಕಬೇಕಾದ ಸ್ಥಿತಿ ಯಾರನ್ನು ದೂರುವದು ?? ನಮ್ಮಿ ಪರಿಸ್ಥಿತಿ ನೋಡುವವರು ಯಾರು ಜೀವನ ಸಂಧ್ಯಾಕಾಲದಲ್ಲಿ ಪ್ರಶ್ನೆಗೆ ಉತ್ತರಗಳೇ ಸಿಗುತ್ತಿಲ್ಲ ಇಲ್ಲಿ ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ವೃದ್ಧರು ನಾವು ಇಲ್ಲಿ ವೃದ್ಧಾಶ್ರಮ ದಲ್ಲಿ ಕುಟುಂಬದ ಪ್ರೀತಿಯಿಂದ ವಂಚಿತರಿಲ್ಲಿ ಜೀವಕಳೆ ಇಲ್ಲದೇ ಬದುಕಿಲ್ಲಿ ನಾವು ರೂಪಿಸಿದೆವು ಮಕ್ಕಳ ಭವಿಶ್ಯ ಭಾರ ವಾಯಿತೇ ನಮ್ಮ ವಯಸ್ಸ ಮಾಡಲಿಲ್ಲ ನಾವು ಅವರಿಗೆ ಸಮಸ್ಯೆ ಮಾಡಿದರವರು ಹೆತ್ತವರನ್ನು ಬೀದಿಗೆ ತಳ್ಳುವ ಮನಸ್ಸ ಮೊಮ್ಮಕ್ಕಳೊಂದಿಗೆ ಆಡುವ ಕನಸು ನನಸಾಗಲಿಲ್ಲ ಮರುಗಿದೆ ಮನಸು ಬದುಕಿನ ಮುಂದಿನ ಕ್ಷಣ ನಮಗೆ ಗೊತ್ತಿಲ್ಲ ಬೆಟ್ಟದಷ್ಟು ಆಸೆ ನಮಗಿಲ್ಲ ತಿಂಗಳಿಗೆ ಒಮ್ಮೆ ನೋಡಬಹುದಲ್ಲ?? ವೃದ್ಧಾಪ್ಯವೆಂಬುದು ಕಟ್ಟಿಟ ಬುತ್ತಿ ಇದು ಪ್ರಕೃತಿಯ ನಿಯಮ, ರೀತಿ ನಮ್ಮ, ಸಾಂಗತ್ಯ ಮನೆಮಂದಿಗೆಲ್ಲ ಅಗತ್ಯ ಇದು ಸರ್ವಕಾಲೀನ ಸತ್ಯ -------------ಪ್ರಕಾಶ ತಡಡಿಕರ--------