ಮುಬಾರಕ್
ಹಟದ ಕಾಲಚಕ್ರದ , ಕಾಲಗತಿ ಅರಿಯದೆ, ಅಕಾಲಿಕ
ಸೇಡಿನ ಜ್ವಾಲೆಗೆ ಬಲಿಯಾದೆ ಮುಬಾರಕ್.
ಹಟವಾದಿ ಸದ್ದಾಮನ ಸದ್ದು ಅಡಗಿದ ಸದ್ದು ಕೇಳಿದ್ದರು
ಬದಲಾವಣೆಯ ಗತಿ ಗುರುತಿಸದೆ ಅನರ್ಥಕ್ಕೆ ಬಲಿಯಾದೆ, ಮುಬಾರಕ್.
ಮರಣ, ಮಸಣದ ರುಚಿಕಂಡ ನಿರಂಕುಶಿ ಫಿರೌನ್ ನ
ಪಿರಾಮಿಡ್ ಕಂಡರೂ ಅರಿಯದೆ ನಿರಂಕುಶಿಯಾದೆ, ಮುಬಾರಕ್.
ಸರ್ವಾಧಿಕಾರ, ಪ್ರಜಾಪ್ರಭುತ್ವದ ಸಹೋದರನಲ್ಲದಿದ್ದರೂ
ನಿರಂಕುಶದ ಅಂಕುಶ ಹಿಡಿದು, ಪ್ರಜಾಶಕ್ತಿಯ ಶಕ್ತಿ ಅರಿಯದೆಹೋದೆ, ಮುಬಾರಕ್.
ಮಣ್ಣು ನೀರಿನ ದೇಹಕ್ಕೆ ದುರಾಸೆಯ ಅಭ್ಯಂಜನ ನೀಡಿ
ನೀರಡಿಕೆಗೆ ನೀರುಕುಡಿಯದೆ ದಾಹದ ನಿಟ್ಟುಸಿರಿಗೆ ಬಲಿಯಾದೆ ಮುಬಾರಕ್.
ಕಾಲದ ಕ್ರಾಂತಿಯ ಉರುಳು ಕುಣಿಕೆಯ ಬಿಗಿತಕ್ಕೆ,
ಮರ್ದಿತನ ಮನದ ಜ್ವಾಲೆಯಸಿಡಿತಕ್ಕೆ ನಿಶಕ್ತನಾಗಿ ನಲುಗಿ ಹೋದೆ ಮುಬಾರಕ್.
ನಗಲಾರದೆ, ಅಳಲಾರದೆ ಕಾಲಚಕ್ರದ ಏರಿಳಿತದಲ್ಲಿ
ನಗದೆ , ನೂವು ಅರಿಯದೆ ಕರುಣೆತೋರದೆ , ಏನನ್ನು ಹೊತ್ತು ಹೋದೆ ಮುಬರಕ್.
ಅಲ್ಹೇಗೆ ಉತ್ತರಿಸುವೆ ಉತ್ತರಕ್ಕೆ ಅವಕಾಶವಿಲ್ಲದ ಅಲ್ಲಿ,
ಕೇವಲ ತಲೆ ಬಾಗಿ ಸಶಕ್ತ ಜ್ವಾಲೆಗೆ ಇಂಧನ ಆಗಿ ಹೋಗುವೆ ಮುಬಾರಕ್.