ಮುರಿದ ಮನದಲಿ

ಮುರಿದ ಮನದಲಿ

ಕವನ

ಮುರಿದ ಮನದಲಿ ಕನಸು ಮುಗಿದಿದೆ

ಎದೆಯ ನದಿಯಲಿ ದುಗುಡ ಹರಿದಿದೆ        {ಪಲ್ಲವಿ}

ದೋಣಿ ಎಲ್ಲೋ ಮುಳುಗಿದೆ

ಪಯಣ ನಿ೦ತು ನಲುಗಿದೆ                       {ಅನು ಪಲ್ಲವಿ}

ಯಾವ ಹಾಡನು ಹೇಗೆ ಹಾಡಲಿ

ಅವಳ ಎದೆಯನು ಹೇಗೆ ಕಾಡಲಿ

ಕಳೆದು ಹೋಗಿದೆ ಸ೦ತಸ

ಉಳಿದು ಹೋಯಿತು ಸ೦ಕಟ                   { 1 }

ಯಾರು ಮಾಡಿದ ಯಾವ ತಪ್ಪಿಗೆ

ಮನವು ಸುಮ್ಮನೆ ಯಾಕೆ ಒಪ್ಪಿದೆ

ಬಾನು ಕತ್ತಲು ಹಾಸಿದೆ

ಯಾವ ದಾರಿಯು ಕಾಣದೆ                        { 2 }

ಸುಖದ ಹಾದಿಗೆ ಬೇಲಿ ಹಾಕಿದೆ

ಪ್ರೀತಿ ಕೋಣೆಯು ಖಾಲಿ ಯಾಕಿದೆ

ಬರಡು ಭೂಮಿಯ ಹಾಗಿದೆ

ಕೊ೦ಚ ಒಲವಿಗೆ ಕಾದಿದೆ                          { 3 }

 

-ಕಾ.ವೀ.ಕೃಷ್ಣದಾಸ್ (ಯಶುಪ್ರಿಯ ಪಕ್ಷಿಕೆರೆ )

 

Comments