ಮುಳ್ಳಿನಿಂದ ಬಣ್ಣದೆಡೆಗೆ ...

ಮುಳ್ಳಿನಿಂದ ಬಣ್ಣದೆಡೆಗೆ ...

ಕವನ

ಮುಳ್ಳಿನಿಂದ ಬಣ್ಣದೆಡೆಗೆ ....

ಹಸಿರೆಲೆಗಳು ನೂರಾರು ಸಾಸಿವೆ ಕಾಳಿನ ಬಿಳಿ ಪುಟ್ಟಮೊಟ್ಟೆ  ಹಣ್ಣಾಗಿ ಉದುರಿ ಬೀಳುವ ತರಗಲೆಯಲಿ ಸಿಕ್ಕಿತೆ ?

ಹೆಕ್ಕಿ ನೋಡುವರಿಲ್ಲ ಫಕ್ಕನೆ ಚಿಕ್ಕ ಹಸಿರು ಹುಳುವಾಯಿತೇನೋ ?

ನೋಡಿದರೆ ಮೈಯೆಲ್ಲಾ ಮುಳ್ಳು ಹಳ್ಳಕ ಹೆಜ್ಜೆ ಸರಿಸುತ್ತಾ ಅತ್ತಿತ್ತ ನುಲಿಯುತ್ತ ಹೊಕ್ಕಿತ್ತು ಕತ್ತು ಸುತ್ತ ಕತ್ತಲಿದ್ದ ಪುಟ್ಟ ಚೀಲದಿ ರವಿ ಕಿರಣದ ಸೋಂಕಿಲ್ಲ ಬಣ್ಣದ ಬದುಕಿಲ್ಲ

ಮುಳ್ಳಿನ ಮೈ ಚುಚ್ಚಿ ಅಚ್ಚಾದ ನೋವಿನ ಜೀವನವೇ ಕೊನೆಯೆಂದು ತಿಳಿದಿರಲು

ಓಹ್ !!! ಅದೇನು ಬಣ್ಣ ಬಣ್ಣದ ನವಿರು ಪತ್ತಲು ತನ್ನ ಸುತ್ತಲು

ಚುಚ್ಚಿ ನೋಯಿಸಿ ಕಾಡಿದ ಆ ಮುಳ್ಳು ಮಾಯ !!!

ಆಹಾ ಕಣ್ಣ ಕಾಂತಿಯನು ಹೊಳಪಿಸುವ ದಿನಕರ ತುಂಬು ತಂಗಾಳಿ

ಓಹ್! ಅಲ್ಲಿಲ್ಲೆ ಸರಿದು ಹರಿದಾಡಿ ಇರುವುದೇ ಅಲ್ಲ ಈ ಜೀವನ

ಹೊಂಬಣ್ಣದ ಚೆಂದದ ಭಾವದಲಿ ಜೀವ ಜೊತೆಗೂಡಿ ಎಲ್ಲೆಡೆ ಹಾರಾಡಿ ಕುಣಿ ನಲಿದಾಡಿ ದುಗುಡವನು ಓಡಿಸಿ ಹಿರಿ ಹಿರಿ ಹಿಗ್ಗಿ ನಕ್ಕಿಸೊಕ್ಕಿ ಹಿಗ್ಗಿತ್ತು ಚೆಂದದ ಆ ಪುಟ್ಟ ಚಿಟ್ಟೆ

——ರೂಪಾ

ಚಿತ್ರ್