ಮುಳ್ಳುಸೌತೆ ಅಪ್ಪ
ಬೇಕಿರುವ ಸಾಮಗ್ರಿ
ಬೆಳ್ತಿಗೆ ಅಕ್ಕಿ ೨ ಕಪ್, ತೆಂಗಿನ ಕಾಯಿ ತುರಿ ಅರ್ಧ ಕಪ್, ಬೆಲ್ಲದ ಹುಡಿ ೨ ಕಪ್, ಮುಳ್ಳು ಸೌತೆ (ತುರಿದದ್ದು) ಒಂದುವರೆ ಕಪ್, ಅವಲಕ್ಕಿ ಅರ್ಧ ಕಪ್, ಚಿಟಿಕೆ ಏಲಕ್ಕಿ ಹಾಗೂ ಉಪ್ಪು.
ತಯಾರಿಸುವ ವಿಧಾನ
ನೆನೆಸಿದ ಬೆಳ್ತಿಗೆ ಅಕ್ಕಿ, ಉಪ್ಪು, ತೆಂಗಿನಕಾಯಿ ಎಸಳು (ತುರಿ), ಚಿಟಿಕೆ ಏಲಕ್ಕಿ ಹುಡಿ, ಬೆಲ್ಲದ ಹುಡಿ, ತುರಿದ ಮುಳ್ಳು ಸೌತೆ, ಅವಲಕ್ಕಿ ಎಲ್ಲವನ್ನೂ ನಯವಾಗಿ ರುಬ್ಬಿ, ಅಪ್ಪದ ಪಾತ್ರೆಯಲ್ಲಿ ತುಪ್ಪ ಹಚ್ಚಿ ಎರೆಯಬೇಕು. ಪುನಃ ಕವುಚಿ ಹಾಕಿ ಸರಿಯಾಗಿ ಬೆಂದಾಗುವಾಗ ತೆಗೆಯಬೇಕು. ತಿನ್ನಲು ಬಹಳ ರುಚಿ ಈ ಅಪ್ಪ.
-ರತ್ನಾ ಕೆ .ಭಟ್, ತಲಂಜೇರಿ